×
Ad

ತೆಲಂಗಾಣ | ಸಂಪುಟ ವಿಸ್ತರಿಸಿದ ಸಿಎಂ ರೇವಂತ್ ರೆಡ್ಡಿ : ಮೂವರು ನೂತನ ಸಚಿವರು ಪ್ರಮಾಣವಚನ

Update: 2025-06-08 15:30 IST
Photo | thehindu

ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ರವಿವಾರ ಸಂಪುಟವನ್ನು ವಿಸ್ತರಿಸಿದ್ದು, ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶಾಸಕರಾದ ಜಿ.ವಿವೇಕ್ ವೆಂಕಟ ಸ್ವಾಮಿ, ಅಡ್ಲೂರಿ ಲಕ್ಷ್ಮಣ ಕುಮಾರ್, ವಾಕಿಟಿ ಶ್ರೀಹರಿ ನೂತನ ಸಚಿವರಾಗಿ  ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿಷ್ಣುದೇವ ವರ್ಮಾ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಇದಲ್ಲದೆ ತೆಲಂಗಾಣ ವಿಧಾನಸಭೆಯ ಉಪಸಭಾಪತಿಯಾಗಿ ಶಾಸಕ ರಾಮಚಂದರ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇದೀಗ ಒಟ್ಟು ಸಚಿವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News