×
Ad

ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರ ಶಾಲೆಯನ್ನು ವಶಕ್ಕೆ ಪಡೆದ ಉತ್ತರ ಪ್ರದೇಶ ಸರಕಾರ

Update: 2023-11-11 12:01 IST

Azam Khan- (PTI File Photo )

ರಾಮ್ಪುರ (ಉತ್ತರ ಪ್ರದೇಶ): ರಾಜ್ಯ ಸಚಿವ ಸಂಪುಟದ ನಿರ್ಣಯದಂತೆ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ (Azam Khan) ಅವರ ಕಚೇರಿ ಹಾಗೂ ಸಮಾಜವಾದಿ ಪಕ್ಷದ ಚಟುವಟಿಕೆಗಳಿಗಾಗಿ ಮೀಸಲಿದ್ದ ಮತ್ತೊಂದು ಕಟ್ಟಡ ಸೇರಿದಂತೆ ಅವರ ಟ್ರಸ್ಟ್ ನಡೆಸುತ್ತಿದ್ದ ರಾಮ್ಪುರ ಸಾರ್ವಜನಿಕ ಶಾಲೆಯ ಸ್ವಾಧೀನವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಲಾಲ್ತಾ ಪ್ರಸಾದ್ ಶಾಕ್ಯ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಸಾರ್ ಸಿಂಗ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಆ ಎರಡು ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಯಿತು. ಈ ಎರಡು ಸ್ವತ್ತಿನ ಸ್ವಾಧೀನವನ್ನು ಜಿಲ್ಲಾ ಶಾಲಾ ನಿರೀಕ್ಷಕ(DIOS)ರ ಸ್ವಾಧೀನಕ್ಕೆ ನೀಡಲಾಗಿದ್ದು, ಬೀಗಮುದ್ರೆ ಹಾಕಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಮ್ಪುರದಲ್ಲಿನ ಆಝಂ ಖಾನ್ ರ ಮೌಲಾನಾ ಮುಹಮ್ಮದ್ ಅಲಿ ಜೌಹರ್ ಟ್ರಸ್ಟ್ ಗೆ ಸೇರಿದ ಕಟ್ಟಡವನ್ನು ತೆರವುಗೊಳಿಸುವಂತೆ ಜಿಲ್ಲಾ ಶಾಲಾ ನಿರೀಕ್ಷಕರು ನವೆಂಬರ್ 2ರಂದು ನೋಟಿಸ್ ಜಾರಿಗೊಳಿಸಿದ್ದರು.

ಇದಕ್ಕೂ ಮುನ್ನ ಮುಹಮ್ಮದ್ ಅಲಿ ಜೌಹರ್ ಟ್ರಸ್ಟ್ ಗೆ ಭೋಗ್ಯದ ಆಧಾರದಲ್ಲಿ ಮಂಜೂರು ಮಾಡಲಾಗಿದ್ದ ಜಮೀನಿನ ಮಾಲಕತ್ವದ ಮೇಲೆ ಮರು ಹಕ್ಕು ಸ್ವಾಮ್ಯ ಸಾಧಿಸುವ ಪ್ರಸ್ತಾವನೆಗೆ ಅಕ್ಟೋಬರ್ 31ರಂದು ಉತ್ತರ ಪ್ರದೇಶ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಈ ಜಮೀನನ್ನು ರಾಜ್ಯ ಸರ್ಕಾರದ ಪ್ರೌಢ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವಂತೆ ರಾಜ್ಯ ಸಚಿವ ಸಂಪುಟ ಸೂಚಿಸಿತ್ತು.

ಭೋಗ್ಯದ ಕರಾರುಗಳನ್ನು ಉಲ್ಲಂಘಿಸಲಾಗಿದೆ ಎಂದು ಸಮಿತಿಯೊಂದು ನೀಡಿದ್ದ ವರದಿಯನ್ನು ಆಧರಿಸಿ ರಾಜ್ಯ ಸರಕಾರವು ಜಮೀನಿನ ಮಾಲಕತ್ವವನ್ನು ಹಿಂಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News