×
Ad

60 ಕೋಟಿ ರೂ. ವಂಚನೆ ಆರೋಪ ನಿರಾಕರಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ

Update: 2025-08-14 12:31 IST

Photo credit: PTI

ಹೊಸದಿಲ್ಲಿ: ಮುಂಬೈ ಮೂಲದ ಉದ್ಯಮಿಯೋರ್ವರಿಗೆ 60 ಕೋಟಿ ರೂ. ವಂಚನೆ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈನ ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣ ದಾಖಲಿಸಿಕೊಂಡಿದೆ. ಆದರೆ ಈ ಆರೋಪವನ್ನು ಸ್ಟಾರ್ ದಂಪತಿ ನಿರಾಕರಿಸಿದ್ದು, ಇದು ಹಳೆಯ ವ್ಯವಹಾರವಾಗಿದೆ. ಯಾವುದೇ ಅಪರಾಧ ನಡೆದಿಲ್ಲ ಎಂದು ಹೇಳಿದ್ದಾರೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. "ಇವು ಸಂಪೂರ್ಣ ನಾಗರಿಕ ಸ್ವರೂಪದ ಪ್ರಕರಣಗಳು, ಈ ಬಗ್ಗೆ 2024ರಲ್ಲಿ ಮುಂಬೈ ಎನ್‌ಸಿಎಲ್‌ಟಿ ತೀರ್ಪು ನೀಡಿದೆ. ಈ ವ್ಯವಹಾರ ಹಳೆಯದು, ಕಂಪೆನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಎನ್‌ಸಿಎಲ್‌ಟಿಯಲ್ಲಿ ದೀರ್ಘಕಾಲದ ಕಾನೂನು ಹೋರಾಟ ನಡೆಯಿತು. ಯಾವುದೇ ಅಪರಾಧ ನಡೆದಿಲ್ಲ, ಅಗತ್ಯ ದಾಖಲೆಗಳಲು ಸೇರಿದಂತೆ ನಗದು ಹರಿವು ವಿವರಗಳನ್ನೂ ಆರ್ಥಿಕ ಅಪರಾಧಗಳ ತನಿಖಾ ವಿಭಾಗಕ್ಕೆ (EOW)ಗೆ ಸಲ್ಲಿಸಲಾಗಿದೆ. ತಮ್ಮ ಕಕ್ಷಿದಾರರ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಅವರ ಪತಿ ರಾಜ್ ಕುಂದ್ರಾ ಈಗ ನಿಷ್ಕ್ರಿಯವಾಗಿರುವ ʼಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ʼ ಕಂಪೆನಿಗೆ ಸಂಬಂಧಿಸಿದ ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಸ್ಥಳೀಯ ಉದ್ಯಮಿಯೋರ್ವರಿಗೆ 60 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು.

“2015 ರಿಂದ 2023ರ ಮಧ್ಯೆ ವ್ಯವಹಾರ ವಿಸ್ತರಣೆಗಾಗಿ 60.48 ಕೋಟಿ ರೂ.ಗಳನ್ನು ನೀಡಿದ್ದೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿಕೊಂಡಿದ್ದಾರೆ” ಎಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News