×
Ad

ಹಡಗು ಢಿಕ್ಕಿಯಾಗಿ ಸೇತುವೆ ಕುಸಿತ: ನದಿಗೆ ಉರುಳಿ ಬಿದ್ದ ಬಸ್ ಸಹಿತ 5 ವಾಹನಗಳು

Update: 2024-02-22 22:04 IST

Photo: X \ @IFENG__official

ಬೀಜಿಂಗ್: ದಕ್ಷಿಣ ಚೀನಾದ ಗುವಾಂಗ್‍ಝಾವ್ ನಗರದಲ್ಲಿ ನದಿಯ ಸೇತುವೆಗೆ ಸರಕು ನೌಕೆಯೊಂದು ಢಿಕ್ಕಿಯಾದ ಪರಿಣಾಮ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಆಗ ಸೇತುವೆಯಲ್ಲಿ ಸಾಗುತ್ತಿದ್ದ ಬಸ್ಸು ಸಹಿತ 5 ವಾಹನಗಳು ನದಿಗೆ ಉರುಳಿ ಬಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಇತರ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೊಷಾನ್‍ನಿಂದ ಹೊರಟಿದ್ದ ಸರಕು ನೌಕೆ ಗುವಾಂಗ್‍ಝಾವ್ ನಗರದತ್ತ ಪ್ರಯಾಣಿಸುತ್ತಿತ್ತು. ಗುರುವಾರ ಬೆಳಿಗ್ಗೆ ಪರ್ಲ್ ನದಿಯ ಲಿಕ್ಸಿನ್ಷಾ ಸೇತುವೆಗೆ ಡಿಕ್ಕಿಯಾಗಿದ್ದು ಮುರಿದ ಸೇತುವೆಯ ಕಂಬಗಳಡಿ ನೌಕೆ ಸಿಲುಕಿಕೊಂಡಿದೆ. ಆಗ ಸೇತುವೆಯಲ್ಲಿ ಸಾಗುತ್ತಿದ್ದ ಒಂದು ಬಸ್ಸು ಸಹಿತ 5 ವಾಹನಗಳು ನದಿಗೆ ಉರುಳಿ ಇಬ್ಬರು ಸಾವನ್ನಪ್ಪಿದ್ದು ಇತರ ಮೂವರು ನಾಪತ್ತೆಯಾಗಿದ್ದಾರೆ. ಹಡಗಿನ ಕ್ಯಾಪ್ಟನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News