×
Ad

ಒಂದೇ ದಿನದಲ್ಲಿ ರೂ. 72,500ರಷ್ಟು ಕುಸಿದ ಬೆಳ್ಳಿ; ಕಾರಣವೇನು?

Update: 2026-02-01 11:14 IST

ಸಾಂದರ್ಭಿಕ ಚಿತ್ರ (AI)

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಚಿನ್ನ-ಬೆಳ್ಳಿ ದರದ ಕುಸಿತಕ್ಕೆ ಪ್ರಾಥಮಿಕ ಪ್ರಚೋದನೆಯಾಗಿತ್ತು.


ಶನಿವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಒಂದೇ ದಿನ ಕೆಜಿಗೆ ರೂ. 72,500ರಷ್ಟು ಕುಸಿದಿದೆ. ಹತ್ತು ದಿನಗಳ ಅವಧಿಯಲ್ಲಿ ರೂ. 1 ಲಕ್ಷ ಏರಿಕೆ ಕಂಡಿದ್ದ ಕೆಜಿ ಬೆಳ್ಳಿ ಶನಿವಾರ 72,500ರಷ್ಟು ಕುಸಿತಗೊಂಡಿದೆ.

ಶುಕ್ರವಾರ ಭಾರತದಲ್ಲಿ 3.84 ಲಕ್ಷ ರೂ. ಇದ್ದ 1 ಕೆಜಿ ಬೆಳ್ಳಿ ದರವು ಶನಿವಾರ 3.12 ಲಕ್ಷ ರೂ. ಯಂತೆ ಮಾರಾಟವಾಗಿದೆ. 2025ರ ಡಿಸೆಂಬರ್ 31ರಂದು ಕೆಜಿ ಬೆಳ್ಳಿ ದರವು 2.39 ಲಕ್ಷ ರೂ. ಇತ್ತು. ಅದು ಈಗ 3.12 ಲಕ್ಷಕ್ಕೆ ತಲುಪಿದ್ದು, ಒಂದೇ ತಿಂಗಳಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ.

ಎಂಸಿಎಕ್ಸ್‌ನಲ್ಲಿ ಬೆಳ್ಳಿದರ ಶೇ. 27ರಷ್ಟು ಕುಸಿದಿದ್ದು, ಕೆಜಿಗೆ 100,000 ರೂ. ಗಿಂತ ಹೆಚ್ಚು ಇಳಿದಿದೆ. ಶುಕ್ರವಾರದ (ಅಮೆರಿಕದ ಕಾಲಾವಧಿ) ಸರಕು ಮಾರುಕಟ್ಟೆ ವಹಿವಾಟಿನ ನಂತರ ಬೆಳ್ಳಿ ಬೆಲೆ 2,91,922 ರೂ. ಪ್ರತಿ ಕೆಜಿಗೆ ತಲುಪಿದ್ದು, ಹಿಂದಿನ ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ 3,99,893 ರೂ. ಪ್ರತಿ ಕೆಜಿ ಇತ್ತು.

ಚಿನ್ನ- ಬೆಳ್ಳಿ ದಾಖಲೆಯ ಓಟದ ನಂತರ 2026 ಜನವರಿ 30ರಂದು ಶುಕ್ರವಾರ ಹೂಡಿಕೆದಾರರು ಲಾಭ ಗಳಿಕೆಯ ಮಾರಾಟದ ನಂತರ ಗರಿಷ್ಠ ಕುಸಿತ ಕಂಡಿದೆ. ಎನ್ರಿಚ್ ಮನಿ ಸಿಇಒ ಪೊನ್‌ಮುದಿ ಆರ್ ಅವರು ಹೇಳಿರುವ ಪ್ರಕಾರ, “ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಪ್ರಾಥಮಿಕ ಪ್ರಚೋದನೆಯಾಗಿತ್ತು. ಹಣದುಬ್ಬರ ನಿಯಂತ್ರಣ ಮತ್ತು ಫೆಡ್ ಸ್ವಾತಂತ್ರ್ಯದ ಮೇಲಿನ ಒತ್ತು ನೀಡುವ ಕುರಿತ ಘೋರ ನಿಲುವಿಗೆ ಪ್ರಸಿದ್ಧಿ ಪಡೆದ ವಾರ್ಷ್ ಆಯ್ಕೆ ತ್ವರಿತವಾಗಿ ಮಾರುಕಟ್ಟೆಯಲ್ಲಿ ಸಂಚಲನೆ ಮೂಡಿಸಲು ಕಾರಣವಾಗಿದೆ. ಅಮೆರಿಕನ್ ಡಾಲರ್‌ಗೆ ಬಲ ಬಂದ ತಕ್ಷಣ ಸರಕುಗಳ ಮೇಲೆ ಹೂಡಿಕೆ ಹೆಚ್ಚಾಯಿತು. ದಾಖಲೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರ ತ್ವರಿತವಾಗಿ ಸಡಿಲಗೊಳ್ಳಲಾರಂಭಿಸಿತು. ಫಲಿತಾಂಶವಾಗಿ ಕಂಡು ಬಂದ ಲಿಕ್ವಿಡೇಶನ್‌ನಲ್ಲಿ ಮಾರುಕಟ್ಟೆಯಲ್ಲಿ ಬೆಳ್ಳಿದರ ಧೂಳೀಪಟವಾಯಿತು. ಇದು ಮಾರುಕಟ್ಟೆಯ ರಚನಾತ್ಮಕ ಮರುತಿದ್ದುಪಡಿಗಿಂತ ಹೆಚ್ಚಾಗಿ ಪ್ರಚೋದನೆಯ ಫಲಿತಾಂಶದ ತ್ವರಿತವಾದ ಬದಲಾವಣೆಯಾಗಿದೆ.”

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News