×
Ad

ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ನಿವಾಸ ಬಳಿ ಗುಂಡಿನ ಸದ್ದು; ತೀವ್ರ ವಿಚಾರಣೆ

Update: 2026-02-01 07:57 IST

ರೋಹಿತ್ ಶೆಟ್ಟಿ | Photo Credit : imdb.com

ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿಯವರಿಗೆ ಸೇರಿದ ಜುಹು ನಿವಾಸ ಬಳಿ ಗುಂಡಿನ ಸದ್ದುಗಳು ಕೇಳಿಬಂದ ಬೆನ್ನಲ್ಲೇ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಮುಂಬೈ ಪೊಲೀಸರು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳು ಶೆಟ್ಟಿ ನಿವಾಸಕ್ಕೆ ಧಾವಿಸಿ, ಮನೆಯ ಆವರಣದಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಎಎನ್‍ಐ ವರದಿ ಮಾಡಿದೆ.

ಗುಂಡಿನ ಸದ್ದು ಕೇಳಿಬಂದ ತಕ್ಷಣ ರೋಹಿತ್ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಇಂಡಿಯಾ ಫೋರಂ ವರದಿ ಮಾಡಿದೆ. ಯಾವುದೇ ಗಾಯ ಅಥವಾ ಜೀವಹಾನಿ ವರದಿಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಆ ಸ್ಥಳದಲ್ಲಿ ಯಾರಿಗೂ ಗಾಯಗಳಾಗಲ್ಲ ಮತ್ತು ಯಾವುದೇ ಅಪಾಯವಿಲ್ಲ ಎಂದು ಪೊಲೀಸ್ ಪೋರ್ಟೆಲ್‍ನಿಂದ ತಿಳಿದುಬಂದಿದೆ.

ವಿಧಿವಿಜ್ಞಾನ ತಂಡ ಹಲವು ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆಗಾಗಿ ತಂಡಗಳನ್ನು ನಿಯೋಜಿಸಲಾಗಿದೆ. ಈ ಶಬ್ದದ ಮೂಲ ಅಥವಾ ಸ್ವರೂಪದ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಆದರೆ ಘಟನೆ ಬಳಿಕ ರೋಹಿತ್ ನಿವಾಸದ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿತ್ರ ನಿರ್ದೇಶಕರ ಮನೆಯ ಮುಂದೆ ಪೊಲೀಸ್ ವಾಹನಗಳು ಹಾಗೂ ಭದ್ರತಾ ಸಿಬ್ಬಂದಿ ಬೀಡುಬಿಟ್ಟಿರುವುದು ಹಾಗೂ ಬಾಲ್ಕನಿಯಲ್ಲಿ ಶೋಧ ಕಾರ್ಯ ನಡೆಸುತ್ತಿರವುದು ವಿಡಿಯೊಗಳಲ್ಲಿ ಕಾಣಿಸುತ್ತಿದೆ. ಸಿಂಗಮ್ ಹಾಗೂ ಗೋಲ್‍ಮಾಲ್‍ನಂಥ ಸೂಪರ್ ಹಿಟ್ ಚಿತ್ರಗಳ ಮೂಲಕ ಭಾರತೀಯ ಸಿನಿಮಾ ಜಗತ್ತಿನಲ್ಲಿ ರೋಹಿತ್ ಶೆಟ್ಟಿ ಗಮನ ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News