×
Ad

Maharashtraದ ಪ್ರಥಮ ಮಹಿಳಾ ಡಿಸಿಎಂಗೆ ಮೂರು ಖಾತೆಗಳ ಹೊಣೆ

Update: 2026-02-01 07:53 IST

ಸುನೇತ್ರಾ ಪವಾರ್ |  Photo Credit : PTI 

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಮೂರೇ ದಿನಗಳಲ್ಲಿ ಪತ್ನಿ ಸುನೇತ್ರಾ ಪವಾರ್, ರಾಜ್ಯದ ಪ್ರಥಮ ಮಹಿಳಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸದಾಗಿ ಸಂಪುಟ ಸೇರಿರುವ ಸುನೇತ್ರಾ ಅವರಿಗೆ ಅಬಕಾರ ಸುಂಕ, ಕ್ರೀಡೆ ಮತ್ತು ಯುವಜನ ವ್ಯವಹಾರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆಗಳನ್ನು ವಹಿಸಲಾಗಿದೆ.

ಹಣಕಾಸು ಹಾಗೂ ಯೋಜನಾ ಖಾತೆಗಳನ್ನು ಅವರ ಪತಿ ಹೊಂದಿದ್ದರು. ಈ ಎರಡು ಖಾತೆಗಳನ್ನು ಇನ್ನು ಮುಂದೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿಭಾಯಿಸಲಿದ್ದಾರೆ.

ಇದಕ್ಕೂ ಮುನ್ನ 62 ವರ್ಷ ವಯಸ್ಸಿನ ಸುನೇತ್ರಾ ಪವಾರ್, ಎನ್‍ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಅವಿರೋಧ ಆಯ್ಕೆಯಾಗಿದ್ದರು. ಪಕ್ಷದ ಮುಖಂಡ ಛಗನ್ ಭುಜಬಲ್, ಸುನೇತ್ರಾ ಹೆಸರು ಮಂಡಿಸಿದ್ದು, ದಿಲೀಪ್ ಪಾಟೀಲ್ ಹಾಗೂ ಇತರ ಹಲವು ಶಾಸಕರು ಅನುಮೋದಿಸಿದರು. ಈ ನಿರ್ಧಾರದ ಮಾಹಿತಿಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಲಾಗಿದ್ದು, ತಕ್ಷಣವೇ ಸಿಎಂ ಕಚೇರಿ ಅದನ್ನು ರಾಜ್ಯಪಾಲ ಆಚಾರ್ಯ ದೇವವ್ರತ ಅವರಿಗೆ ಕಳುಹಿಸಿತ್ತು.

ಸುನೇತ್ರಾ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

ಶಾಸಕ ರೋಹಿತ್ ಪವಾರ್ ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ, "ಅಜಿತ್ ದಾದಾ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ; ಆದರೆ ಕೊನೆಪಕ್ಷ ಸುನೇತ್ರಾ ಅವರ ಮೂಲಕ ಅಜಿತ್‍ ದಾದಾ ಅವರನ್ನು ಸ್ವಲ್ಪಮಟ್ಟಿಗೆ ಕಾಣಬಹುದು" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News