×
Ad

ಪ್ರಯಾಣದುದ್ದಕ್ಕೂ ವಿಮಾನದ ಶೌಚಾಲಯದಲ್ಲಿ ಸಿಲುಕಿಕೊಂಡ ಪ್ರಯಾಣಿಕ

Update: 2024-01-17 15:54 IST

ಸಾಂದರ್ಭಿಕ ಚಿತ್ರ (PTI)

ಮುಂಬೈ/ಬೆಂಗಳೂರು: ವಿಮಾನದ ಶೌಚಾಲಯದ ಬಾಗಿಲು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಸ್ಪೈಸ್ ಜೆಟ್ ವಿಮಾನದಲ್ಲಿ ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಸುಮಾರು ಒಂದು ಗಂಟೆಗಳ ಕಾಲ ಶೌಚಾಲಯದಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ ಎಂದು indiatoday.in ವರದಿ ಮಾಡಿದೆ.

ಮುಂಬೈನಿಂದ ಮಧ್ಯಾಹ್ನ 2.13 ಗಂಟೆಗೆ ವಿಮಾನವು ಟೇಕ್ ಆಫ್ ಆದ ನಂತರ ಪುರುಷ ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ತೆರಳಿದ್ದು, ಅವರಲ್ಲೇ ಸಿಕ್ಕಿ ಬಿದ್ದಿದ್ದಾರೆ. ವಿಮಾನವು ಮಧ್ಯಾಹ್ನ 3.10 ಗಂಟೆಗೆ ಬೆಂಗಳೂರಿನಲ್ಲಿ ಭೂಸ್ಪರ್ಶ ಮಾಡಿದ ನಂತರ ತಂತ್ರಜ್ಞರು ಶೌಚಾಲಯದ ಬಾಗಿಲು ತೆರೆಯಲು ಸಾಧ್ಯವಾದ ನಂತರವಷ್ಟೆ ಅವರು ಅಲ್ಲಿಂದ ಹೊರ ಬಂದಿದ್ದಾರೆ.

ಘಟನೆಯ ಕುರಿತು ಪ್ರಯಾಣಿಕನ ಬಳಿ ವಿಷಾದಿಸಿರುವ ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆಯು, ಪ್ರಯಾಣಿಕನಿಗೆ ಸಂಪೂರ್ಣ ಮೊತ್ತವನ್ನು ಮರುಪಾವತಿಸುವುದಾಗಿ ಭರವಸೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News