×
Ad

ಮಂಗಳೂರು | ಸ್ಟ್ಯಾನ್ ಫೋರ್ಡ್ ವಿವಿ ಪ್ರಕಟಿಸಿರುವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶ್ರೀನಿವಾಸ ವಿವಿ ಪ್ರಾಧ್ಯಾಪಕಿ ಯು.ಸಂಧ್ಯಾ ಶೆಣೈ

Update: 2025-09-29 20:11 IST

ಯು.ಸಂಧ್ಯಾ ಶೆಣೈ |Photo Credit: Special Arrangement \ thehindu.com

ಹೊಸದಿಲ್ಲಿ: ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಮೆಟೀರಿಯಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಹಾಗೂ ಪ್ರಧಾನ ಸಂಶೋಧನಾ ವಿಜ್ಞಾನಿಯಾದ ಯು.ಸಂಧ್ಯಾ ಶೆಣೈ ಅವರು ಸೆಪ್ಟೆಂಬರ್ 19ರಂದು ಪ್ರಕಟಗೊಂಡಿರುವ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ‘updated sciencewide author databases of standardised citation indicators’ನಲ್ಲಿ ಸತತ ಮೂರನೆಯ ವರ್ಷವೂ ಶೇ. 2ರಷ್ಟು ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಶ್ರೇಯಾಂಕವು ಸಂಯುಕ್ತ ಅಂಕವನ್ನು ಆಧರಿಸಿದ್ದು, ಸಂಶೋಧನಾ ಕೆಲಸದ ಪರಿಣಾಮದ ಮೇಲೆ ಗಮನ ಕೇಂದ್ರೀಕರಿಸಿದೆ. ಈ ಅಂಕವನ್ನು ಆಗಸ್ಟ್ 1, 2025ರಂತೆ ಎಲ್ಲ ಪ್ರಬಂಧ ಲೇಖಕರ ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ಲೆಕ್ಕ ಮಾಡಲಾಗಿದೆ.

ಯು.ಸಂಧ್ಯಾ ಶೆಣೈ ಅವರ ಸಂಶೋಧನಾ ಕಾರ್ಯವು ಮುಖ್ಯವಾಗಿ ದಕ್ಷ ಉಷ್ಣ ವಿದ್ಯುತ್ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ, ತ್ಯಾಜ್ಯ ಉಷ್ಣತೆಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವತ್ತ ಕೇಂದ್ರೀಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News