×
Ad

ಬೀದಿನಾಯಿಗಳ ತೆರವು ಆದೇಶದಲ್ಲಿ ಬದಲಾವಣೆ ಕೋರಿ ಮನವಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

Update: 2026-01-29 22:50 IST

ಸುಪ್ರೀಂಕೋರ್ಟ್ | Photo Credit : PTI 

ಹೊಸದಿಲ್ಲಿ,ಜ.29: ಬೀದಿನಾಯಿಗಳನ್ನು ತೆರವುಗೊಳಿಸುವ ಪ್ರಕರಣಕ್ಕೆ ಸಂಬಂಧಿಸಿ ತಾನು ಈ ಹಿಂದೆ ನೀಡಿದ್ದ ಆದೇಶಗಳಲ್ಲಿ ಬದಲಾವಣೆಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಕಾಯ್ದಿರಿಸಿದೆ.

ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಂಜಾಬ್, ತಮಿಳುನಾಡು, ಉತ್ತರಪ್ರದೇಶ ಹಾಗೂ ರಾಜಸ್ಥಾನದಂತ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಆ್ಯಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಗೌರವ್ ಅಗರ್ವಾಲ್ ಅವರ ಹೇಳಿಕೆಯನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು.

ರಾಷ್ಟ್ರೀಯ ಹೆದ್ದಾರಿಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸಲು ಹಾಗೂ ರಸ್ತೆಗಳಿಗೆ ಬೇಲಿ ನಿರ್ಮಿಸಬೇಕೆಂದು ತಾನು 2025ರ ನವೆಂಬರ್ 7ರಂದು ನೀಡಿದ್ದ ಆದೇಶದ ಅನುಸರಣೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ನ್ಯಾಯವಾದಿಯವರ ವಾದವನ್ನು ಕೂಡ ನ್ಯಾಯಪೀಠ ಆಲಿಸಿತು.

ಪ್ರಾಣಿಗಳಿಗೆ ಆಶ್ರಯಧಾಮಗಳನ್ನು ನಿರ್ಮಿಸಲು ಹಾಗೂ ಪ್ರಾಣಿಗಳಿಗೆ ಜನನ ನಿಯಂತ್ರಣ ಕೇಂದ್ರಗಳನ್ನು ನಿರ್ಮಿಸಲು ಅನುಮತಿ ಕೋರಿದ ಎನ್‌ಜಿಒಗಳ ಅರ್ಜಿಗಳನ್ನು ಪರಿಷ್ಕರಿಸುವಂತೆಯೂ ನ್ಯಾಯಾಲಯವು ಈ ಸಂದರ್ಭ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News