×
Ad

ಹೈದರಾಬಾದ್:ಕಿರುತೆರೆ ನಿರೂಪಕಿ ಸ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ

Update: 2025-06-28 20:37 IST

ಸ್ವೇಚ್ಛಾ ವೋತಾರ್ಕರ್ | PC : X \ @swetchajourno

ಹೈದರಾಬಾದ್: ಪತ್ರಕರ್ತೆ ಹಾಗೂ ಪ್ರತಿಷ್ಠಿತ ತೆಲುಗು ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿದ್ದ ಸ್ವೇಚ್ಛಾ ವೋತಾರ್ಕರ್(40) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲಿಸರು ಶನಿವಾರ ತಿಳಿಸಿದರು.

ಶುಕ್ರವಾರ ರಾತ್ರಿ ಸ್ವೇಚ್ಛಾ ತನ್ನ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೃತಳ ತಂದೆಯ ದೂರಿನ ಮೇರೆಗೆ ಪೋಲಿಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನ್ನ ದೂರಿನಲ್ಲಿ ವ್ಯಕ್ತಿಯೋರ್ವನ ಹೆಸರನ್ನು ಉಲ್ಲೇಖಿಸಿರುವ ಅವರು ತನ್ನ ಪುತ್ರಿಯ ಸಾವಿಗೆ ಆತನೇ ಕಾರಣ ಎಂದು ಆರೋಪಿಸಿದ್ದಾರೆ.

ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ಸ್ವೇಚ್ಛಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News