ಇನ್‌ಸ್ಟಾಗ್ರಾಮ್ ರೀಲ್ ಗೆ ದ್ವೇಷದ ಕಮೆಂಟ್: 16 ವರ್ಷದ ಕಲಾವಿದ ಆತ್ಮಹತ್ಯೆ
Update: 2023-11-25 12:15 IST
ಪ್ರಾಂಶು (Photo: Instagram)
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯ 16 ವರ್ಷದ ಕ್ವೀರ್ ಕಲಾವಿದರೊಬ್ಬರು ಇನ್‌ಸ್ಟಾಗ್ರಾಮ್ ರೀಲ್ ಗೆ ಬಂದ ಸಾವಿರಾರು ದ್ವೇಷದ ಕಮೆಂಟ್‌ಗಳನ್ನು ಕಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉಜ್ಜಯಿನಿಯ 16 ವರ್ಷದ ಕ್ವೀರ್ ಸಮುದಾಯದ ಕಲಾವಿದ ಪ್ರಾಂಶು ಉಜ್ಜಯಿನಿಯ ಮೇಕಪ್ ಕಲಾವಿದ ಕೂಡಾ ಆಗಿದ್ದರು. ಅವರು ಮೇಕಪ್ ಮತ್ತು ಸೌಂದರ್ಯದ ವಿಷಯವನ್ನು ರೀಲ್ ಗಳ ಮುಖಾಂತರ ಪೋಸ್ಟ್ ಮಾಡುತ್ತಿದ್ದರು.
ವಿಡಿಯೋ ಒಂದರ ಕೆಳಗೆ ಸಾವಿರಾರು ಮಂದಿ ಟೀಕೆಗಳನ್ನು ಮಾಡಿದ್ದು, ಇದರಿಂದ ಮನನೊಂದ ಪ್ರಾಂಶು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.