×
Ad

ಜಮ್ಮು-ಕಾಶ್ಮೀರ | ‘ದಿ ರೆಸಿಸ್ಟೆನ್ಸ್ ಫ್ರಂಟ್’ ಸ್ಥಾಪಕ ಸಜ್ಜಾದ್ ಗುಲ್‌ಗೆ ಸೇರಿದ 2 ಕೋ.ರೂ. ಮೌಲ್ಯದ ಸೊತ್ತು ಮುಟ್ಟುಗೋಲು

Update: 2025-10-04 20:35 IST

Photo Credit: The Hindu

ಶ್ರೀನಗರ, ಅ. 4: ಲಷ್ಕರೆ ತೈಬಾದ ಶಾಖೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಸಜ್ಜಾದ್ ಗುಲ್‌ಗೆ ಸೇರಿದ 2 ಕೋ.ರೂ. ಮೌಲ್ಯದ ಸೊತ್ತನ್ನು ಪೊಲೀಸರು ಶನಿವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಅನ್ನು ಹೊಣೆ ಮಾಡಲಾಗಿದೆ. ಪೊಲೀಸರು ಎಂಚ್ಎಂಟಿ, ರೋಸ್ ಅವೆನ್ಯೂನ 15 ಮರ್ಲಾಸ್ (ಸರ್ವೇ ಸಂಖ್ಯೆ 43 ಎಂಐಎನ್, ಎಸ್ಟೇಟ್ ಖುಶಿಪೋರಾ)ನಲ್ಲಿ ನಿರ್ಮಾಣ ಮಾಡಲಾಗಿರುವ ಮೂರು ಮಹಡಿಯ ನಿವಾಸವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಪರಿಮಪೋರಾ ಪೊಲೀಸ್ ಠಾಣೆಯಲ್ಲಿ ಯುಎಪಿಎಯ ಸೆಕ್ಷನ್‌ಗಳಾದ 13, 38, 20 ಹಾಗೂ ಇಐಎಂಸಿಒ ಕಾಯ್ದೆ 2/3ರ ಅಡಿಯಲ್ಲಿ ದಾಖಲಾದ ಎಫ್ಐಆರ್ ಸಂಖ್ಯೆ 235/2022ಕ್ಕೆ ಸಂಬಂಧಿಸಿ ಸಜ್ಜಾದ್ ಗುಲ್ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News