×
Ad

ಗಾಯಕ ಝುಬೀನ್ ಗರ್ಗ್ ಗೆ ಸಾವಿರಾರು ಅಭಿಮಾನಿಗಳಿಂದ ಅಂತಿಮ ವಿದಾಯ

Update: 2025-09-21 20:38 IST

Photo Credit: PTI 

ಗುವಾಹಟಿ: ಅಸ್ಸಾಂನ ಸಾಂಪ್ರಾಯಿಕ ‘ಗಮೋಸ’ ಉಡುಗೆ ಧರಿಸಿ ಗಾಯಕ ಝುಬೀನ್ ಗರ್ಗ್ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಅಭಿಮಾನಿಗಳು ರವಿವಾರ ಮಧ್ಯಾಹ್ನ ಗುವಾಹಟಿಯ ಸರುಜಸಲ್ ಕ್ರೀಡಾಂಗಣಕ್ಕೆ ಆಗಮಿಸಿದರು.

ಸರುಜಸಲ್ ಕ್ರೀಡಾಂಗಣಕ್ಕೆ ಸಾವಿರಾರು ಅಭಿಮಾನಿಗಳು ಪ್ರವಾಹೋಪಾದಿಯಲ್ಲಿ ಹರಿದು ಬಂದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಗಾಯಕ ಝುಬೀನ್ ಗರ್ಗ್ ಅವರ ಪಾರ್ಥಿವ ಶರೀರವನ್ನು ರವಿವಾರ ಇಡೀ ರಾತ್ರಿ ಹಾಗೂ ಸೋಮವಾರ ಕೂಡಾ ಕ್ರೀಡಾಂಗಣದಲ್ಲಿ ಇಡಲಾಗುವುದು ಎಂದು ತಿಳಿಸಿದರು.

ಗಾಯಕ ಝುಬೀನ್ ಗರ್ಗ್ ಗೆ ಅಭಿಮಾನಿಗಳು ತೋರಿದ ಪ್ರೀತಿಗೆ ಅವರ ಪಾರ್ಥಿವ ಶರೀರೊಂದಿಗೆ ಆಗಮಿಸಿದ್ದ ಅವರ ಪತ್ನಿ ಗರಿಮಾ ಧನ್ಯವಾದ ಸಲ್ಲಿಸಿದರು.

ಝುಬೀನ್ ಗರ್ಗ್ ಗೆ ಕುಟುಂಬದ ಸದಸ್ಯರು, ಸಚಿವರು ಹಾಗೂ ಹಿರಿಯ ಸರಕಾರಿ ಅಧಿಕಾರಿಗಳು ಅವರ ಪಾರ್ಥಿವ ಶರೀರಕ್ಕೆ ತಲೆಬಾಗಿ, ಪುಷ್ಪಗುಚ್ಛಗಳನ್ನಿರಿಸುವ ಮೂಲಕ, ಅಂತಿಮ ಗೌರವ ನಮನ ಸಲ್ಲಿಸಿದರು.

ಮಧ್ಯಾಹ್ನ ಭಾರಿ ಬಿಸಿಲಿನಿಂದ ಬಸವಳಿದ ಹಲವಾರು ಅಭಿಮಾನಿಗಳು ತಲೆ ತಿರುಗಿ ಬಿದ್ದ ಘಟನೆಯೂ ಈ ವೇಳೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News