×
Ad

ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಆರೋಪ: 50 ಲಕ್ಷ ರೂ. ಹಣ ವರ್ಗಾವಣೆ?

Update: 2025-11-10 20:12 IST

Photo Credit : PTI

ಹೊಸದಿಲ್ಲಿ, ನ. 10: ಲಡ್ಡು ತಯಾರಿಕೆಗಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪೂರೈಸಲಾಗಿರುವ ಕಲಬೆರಕೆ ತುಪ್ಪಕ್ಕೆ ಸಂಬಂಧಿಸಿ 50 ಲಕ್ಷ ರೂಪಾಯಿ ಹಣ ವರ್ಗಾವಣೆ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.

ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿಯ ಆಪ್ತ ಸಹಾಯಕ ಕೆ. ಚಿನ್ನಪ್ಪಣ್ಣ ಈ ಹಣವನ್ನು ನಗದು ರೂಪದಲ್ಲಿ ಉತ್ತರಪ್ರದೇಶದ ಪ್ರೀಮಿಯಮ್ ಅಗ್ರಿ ಫುಡ್ಸ್ ಪ್ರೈವೇಡ್ ಲಿಮಿಟೆಡ್‌ ನೊಂದಿಗೆ ನಂಟು ಹೊಂದಿರುವ ಹವಾಲಾ ಏಜಂಟ್‌ ಗಳಿಂದ ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಚಿನ್ನಪ್ಪಣ್ಣ ದಿಲ್ಲಿಯ ಹವಾಲಾ ಏಜಂಟ್ ಅಮನ್ ಗುಪ್ತಾನಿಂದ 20 ಲಕ್ಷ ರೂಪಾಯಿ ಮತ್ತು ಉಳಿದ ಹಣವನ್ನು ಪ್ರೀಮಿಯರ್ ಅಗ್ರಿ ಫೂಡ್ಸ್‌ನ ಹಿರಿಯ ಕಾರ್ಯಕಾರಿ ನಿರ್ದೇಶಕ ವಿಜಯ್ ಗುಪ್ತಾನಿಂದ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಈ ಎರಡೂ ವ್ಯವಹಾರಗಳನ್ನು ದಿಲ್ಲಿಯ ಪಟೇಲ್ ನಗರ ಮೆಟ್ರೋ ಸ್ಟೇಶನ್ ಸಮೀಪ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಜಗತ್ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ‘‘ಅಶುದ್ಧ’’ ತುಪ್ಪದಿಂದ ತಯಾರಿಸಲಾಗಿದೆ ಎಂಬುದಾಗಿ ಕಳೆದ ವರ್ಷ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಅದು ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

ಬಳಿಕ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಅದು ಆರೋಪಗಳ ತನಿಖೆಗಾಗಿ ಸಿಬಿಐ, ರಾಜ್ಯ ಪೊಲೀಸ್ ಪಡೆ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವೊಂದನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News