×
Ad

ಕೇಂದ್ರ ಬಜೆಟ್‌ ನಲ್ಲಿ MGNREGAಗೆ 30,000 ಕೋಟಿ ರೂ.!

Update: 2026-02-01 20:42 IST

Photo Credit : PTI

ಹೊಸದಿಲ್ಲಿ, ಫೆ.1: ವಿಬಿ–ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರವು ಅದಕ್ಕಾಗಿ ಮುಂಗಡಪತ್ರದಲ್ಲಿ 95,692.31 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದೇ ವೇಳೆ MGNREGAಕ್ಕೆ 30,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

ವಿಬಿ–ಜಿ ರಾಮ್ ಜಿ ಜಾರಿಗೊಳ್ಳುವವರೆಗೆ MGNREGA ಯೋಜನೆ ಮುಂದುವರಿಯಲಿದ್ದು, ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬಜೆಟ್ ದಾಖಲೆಗಳಂತೆ ಸಚಿವಾಲಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು 1,94,368.81 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ (ಕಳೆದ ವರ್ಷ 1,86,995.61 ಕೋಟಿ ರೂ.).

• ಭೂ ಸಂಪನ್ಮೂಲಗಳ ಇಲಾಖೆಗೆ 2,654.33 ಕೋಟಿ ರೂ.

• ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ (ಪಿಎಂಜಿಎಸ್ವೈ) 19,000 ಕೋಟಿ ರೂ.

• ದೀನದಯಾಳ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ಗೆ 19,200 ಕೋಟಿ ರೂ.

• ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ (ಪಿಎಂಎವೈ–ಜಿ)ಗೆ 54,916.70 ಕೋಟಿ ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News