2025ರ UPSC ಅಂತಿಮ ಫಲಿತಾಂಶ ಪ್ರಕಟ : ಅನುಜ್ ಅಗ್ನಿಹೋತ್ರಿ ದೇಶಕ್ಕೆ ಮೊದಲ ರ‍್ಯಾಂಕ್
ರಾಜೇಶ್ವರಿ ಸುವೆ ದೇಶಕ್ಕೆ ದ್ವಿತೀಯ, 958 ಮಂದಿ ತೇರ್ಗಡೆ
Update: 2026-03-06 16:13 IST
Photo Credit : x \ @airnewsalerts
ಹೊಸದಿಲ್ಲಿ : ಕೇಂದ್ರ ಲೋಕಸೇವಾ ಆಯೋಗ 2025ರ ಸಾಲಿನ ಯುಪಿಎಸ್‌ಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 958 ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಕೇಂದ್ರ ಸರಕಾರಿ ಸೇವೆಗಳಿಗೆ ನಿಯೋಜಿಸಲಾಗಿದೆ.
ಅನುಜ್ ಅಗ್ನಿಹೋತ್ರಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದು, ರಾಜೇಶ್ವರಿ ಸುವೆ ಮತ್ತು ಆಕಾಶ್ ಧುಲ್ ಕ್ರಮವಾಗಿ 2 ನೇ ಮತ್ತು 3ನೇ ರ‍್ಯಾಂಕ್ ಪಡೆದಿದ್ದಾರೆ.
ಈ ಬಾರಿ ಕೇಂದ್ರೀಯ ಲೋಕ ಸೇವಾ ಆಯೋಗಕ್ಕೆ ಆಯ್ಕೆಯಾದ 958 ಅಭ್ಯರ್ಥಿಗಳಲ್ಲಿ 317 ಅಭ್ಯರ್ಥಿಗಳು ಸಾಮಾನ್ಯ ವರ್ಗದಿಂದ, 104 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ (EWS), 306 ಮಂದಿ ಇತರ ಹಿಂದುಳಿದ ವರ್ಗ (OBC), 158 ಮಂದಿ ಪರಿಶಿಷ್ಟ ಜಾತಿ (SC) ಮತ್ತು 73 ಮಂದಿ ಪರಿಶಿಷ್ಟ ಪಂಗಡಗಳಿಗೆ (ST) ಸೇರಿದವರಾಗಿದ್ದಾರೆ ಎಂದು Press Information Bureau ತಿಳಿಸಿದೆ.