×
Ad

ಉತ್ತರ ಪ್ರದೇಶ | ಕ್ಯಾಂಪಸ್‌ನಲ್ಲಿ ಶಂಕಾಸ್ಪದ ಸ್ಥಿತಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಮೃತದೇಹ ಪತ್ತೆ

Update: 2024-10-06 22:36 IST

PC : indiatoday.in

ಶಾಹಜಹಾನ್‌ಪುರ : ಇಲ್ಲಿಯ ಖಾಸಗಿ ವರುಣ ಅರ್ಜುನ ಮೆಡಿಕಲ್ ಕಾಲೇಜಿನ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಮೃತದೇಹವು ಕ್ಯಾಂಪಸ್‌ನಲ್ಲಿಯ ಹಾಸ್ಟೆಲ್‌ನ ಹಿಂಭಾಗದಲ್ಲಿ ಶಂಕಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೋಲಿಸರು ರವಿವಾರ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಗೋರಖಪುರ ನಿವಾಸಿ ಕುಶಾಗ್ರ ಪ್ರತಾಪ್ ಸಿಂಗ್(24) ಎಂದು ಗುರುತಿಸಲಾಗಿದೆ.

ಸಿಂಗ್ ಮೂರಂತಸ್ತುಗಳ ಹಾಸ್ಟೆಲ್ ಕಟ್ಟಡದ ನೆಲಅಂತಸ್ತಿನಲ್ಲಿ ವಾಸವಿದ್ದ. ಆತ ತಾನಾಗಿಯೇ ಬಿದ್ದಿದ್ದಾನೆ ಅಥವಾ ಯಾರೋ ಆತನನ್ನು ತಳ್ಳಿರುವಂತೆ ಕಂಡು ಬರುತ್ತಿದೆ ಎಂದು ಪೋಲಿಸರು ತಿಳಿಸಿದರು.

ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News