×
Ad

ಉತ್ತರ ಪ್ರದೇಶ| ಗೋದಿ ಕದ್ದ ಶಂಕೆಯಿಂದ ಮೂವರು ದಲಿತ ಬಾಲಕರನ್ನು ಥಳಿಸಿ,ತಲೆ ಬೋಳಿಸಿ ಮೆರವಣಿಗೆ ಮಾಡಿದರು

Update: 2024-10-10 21:58 IST

ಸಾಂದರ್ಭಿಕ ಚಿತ್ರ

ಬಹರೈಚ್ : 5 ಕೆ.ಜಿ.ಅಕ್ಕಿ ಕದ್ದಿದ್ದಾರೆಂಬ ಶಂಕೆಯಿಂದ ಇಬ್ಬರು ಕೋಳಿ ಸಾಕಣೆ ಕೇಂದ್ರದ ಮಾಲಿಕರು ಇತರ ಇಬ್ಬರೊಂದಿಗೆ ಸೇರಿಕೊಂಡು ದಲಿತ ಸಮುದಾಯದ ಮೂವರು ಬಾಲಕರನ್ನು ಥಳಿಸಿ,ಅವರ ತಲೆಗಳನ್ನು ಬೋಳಿಸಿ,ಮುಖಕ್ಕೆ ಮಸಿ ಬಳಿದು ಮೆರವಣಿಗೆ ಮಾಡಿದ ಘಟನೆ ಬಹರೈಚ್ ಜಿಲ್ಲೆಯ ತಾಜ್‌ಪುರ ಟೇಡಿಯಾ ಗ್ರಾಮದಲ್ಲಿ ನಡೆದಿದೆ.

ಬಾಲಕರು ಕೋಳಿ ಫಾರಂ ಕೆಲಸಕ್ಕೆ ಹಾಜರಾಗದಿದ್ದರಿಂದ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಸಂತ್ರಸ್ತರ ಕುಟುಂಬಗಳು ಆರೋಪಿಸಿವೆ.

ಮಂಗಳವಾರ ಈ ಘಟನೆ ನಡೆದಿದ್ದು,12ರಿಂದ 14ರ ಹರೆಯದ ಬಾಲಕರನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿದ ಸಂದರ್ಭದಲ್ಲಿ ಅವರ ಮುಂಗೈಗಳ ಮೇಲೆ ‘ಕಳ್ಳ’ ಎಂದು ಬರೆಯಲಾಗಿತ್ತು ಮತ್ತು ಕೈಗಳನ್ನು ಕಟ್ಟಲಾಗಿತ್ತು.

ಸಂತ್ರಸ್ತ ಬಾಲಕರ ಕುಟುಂಬ ಸದಸ್ಯರ ದೂರಿನ ಮೇರೆಗೆ ಬುಧವಾರ ಆರೋಪಿಗಳಾದ ನಝೀಂ ಖಾನ್,ಕಾಸಿಂ ಖಾನ್,ಇನಾಯತ್ ಮತ್ತು ಸಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News