ಪತ್ನಿಗೆ ಹೊಡೆಯುವುದನ್ನು ತಡೆಯಲು ಬಂದ ತಾಯಿಯನ್ನು ಇರಿದು ಕೊಂದ ಯುವಕ
Update: 2025-03-07 20:46 IST
ಲಕ್ನೋ: ಉತ್ತರಪ್ರದೇಶದ ಶಹಜಾನ್‌ಪುರದಲ್ಲಿ ತನ್ನ ಮತ್ತು ಪತ್ನಿಯ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿದ ತಾಯಿಯನ್ನು 25 ವರ್ಷದ ಯುವಕನೊಬ್ಬ ಗುರುವಾರ ಭರ್ಚಿಯೊಂದರಿಂದ ಇರಿದು ಕೊಂದಿದ್ದಾನೆ ಎಂದು ಪಿಟಿಐ ಶುಕ್ರವಾರ ವರದಿ ಮಾಡಿದೆ.
ಆರೋಪಿ ವಿನೋದ್ ಕುಮಾರ್‌ನನ್ನು ಬಂಧಿಸಲಾಗಿದೆ.
ಆರೋಪಿಯು ಕುಡಿದ ಅಮಲಿನಲ್ಲಿ ಆಗಾಗ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಅವನು ಗುರುವಾರವೂ ತನ್ನ ಹೆಂಡತಿಗೆ ಹೊಡೆಯುತ್ತಿದ್ದಾಗ ಅವನ 60 ವರ್ಷದ ತಾಯಿ ನೈನಾ ದೇವಿ ಮಧ್ಯಪ್ರವೇಶಿಸಿದರು. ಆಗ ಆರೋಪಿಯು ತನ್ನ ತಾಯಿಯನ್ನು ಭರ್ಚಿಯೊಂದರಿಂದ ತಿವಿದು ಕೊಂದನು ಎಂದು ಪೊಲೀಸ್ ಸೂಪರಿಂಟೆಂಡೆಂಡ್ ರಾಜೇಶ್ ಎಸ್ ಪಿಟಿಐಗೆ ತಿಳಿಸಿದರು.
ಸುದ್ದಿ ಕೇಳಿ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಮತ್ತು ಆರೋಪಿಯನ್ನು ಬಂಧಿಸಿದ್ದಾರೆ.