×
Ad

Zubeen Garg ಮೃತ್ಯು ಪ್ರಕರಣ | 3,500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ, ನಾಲ್ವರ ವಿರುದ್ಧ ಕೊಲೆ ಆರೋಪ

Update: 2025-12-12 20:07 IST

ಜುಬೀನ್ ಗರ್ಗ್ | Photo Credit : PTI 

ಗುವಾಹಟಿ,ಡಿ.12: ಖ್ಯಾತ ಗಾಯಕ Zubeen Garg ಅವರ ಸಾವಿನ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡವು (ಸಿಟ್) ಶುಕ್ರವಾರ ಇಲ್ಲಿಯ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ನಾಲ್ವರನ್ನು ಕೊಲೆ ಆರೋಪಿಗಳೆಂದು ಹೆಸರಿಸಲಾಗಿದೆ.

ಸಿಐಡಿಯ ವಿಶೇಷ ಡಿಐಜಿ ಮುನ್ನಾ ಪ್ರಸಾದ ಗುಪ್ತಾ ನೇತೃತ್ವದ ಸಿಟ್ ಚೀಫ್ ಜ್ಯುಡಿಷಿಯಲ್ ಮಾಜಿಸ್ಟ್ರೇಟ್, ಕಾಮರೂಪ (ಮೆಟ್ರೋ) ಅವರ ನ್ಯಾಯಾಲಯದಲ್ಲಿ 3,500ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿತು. ಅವುಗಳನು ನಾಲ್ಕು ಟ್ರಂಕ್‌ಗಳಲ್ಲಿ ನ್ಯಾಯಾಲಯಕ್ಕೆ ತರಲಾಗಿತ್ತು.

ಜುಬೀನ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ, ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವವನ್ನು ಆಯೋಜಿಸಿದ್ದ ಶ್ಯಾಮಕಾನು ಮಹಂತ,ಅವರ ಇಬ್ಬರು ಬ್ಯಾಂಡ್ ಸದಸ್ಯರಾದ ಶೇಖರ ಗೋಸ್ವಾಮಿ ಮತ್ತು ಅಮ್ರತಪ್ರಭಾ ಮಹಂತ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದೆ.

Zubeen Garg ಸೋದರ ಸಂಬಂಧಿ ಹಾಗೂ ಪೋಲಿಸ್ ಅಧಿಕಾರಿ ಸಾಂದೀಪನ್ ಗರ್ಗ್ ಅವರನ್ನು ಬಿಎನ್‌ಎಸ್‌ನ ಕಲಂ 105ರಡಿ (ಕೊಲೆಯಲ್ಲದ ನರಹತ್ಯೆ) ಆರೋಪಿಯನ್ನಾಗಿ ಮಾಡಲಾಗಿದೆ.

ಶರ್ಮಾ, ಮಹಂತ ಹಾಗೂ Zubeen Garg ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳಾದ ನಂದೇಶ್ವರ ಬೋರಾ ಮತ್ತು ಪರೇಶ ಬೈಶಿಯಾ ವಿರುದ್ಧ ನಂಬಿಕೆ ದ್ರೋಹದ ಆರೋಪವನ್ನೂ ಹೊರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿರುವ ಸಿಟ್, Zubeen Garg ಕುಟುಂಬ ಸದಸ್ಯರು, ಸ್ನೇಹಿತರು, ಬ್ಯಾಂಡ್ ಸದಸ್ಯರು, ಅಭಿಮಾನಿಗಳು, ಸಿಂಗಾಪುರದಲ್ಲಿರುವ ಅಸ್ಸಾಮಿ ಎನ್‌ಆರ್‌ಐಗಳು ಮತ್ತು ಇತರರನ್ನು ತನಿಖೆ ಸಂದರ್ಭದಲ್ಲಿ ವಿಚಾರಣೆ ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News