ಲಿಬಿಯಾ ಪೊಲೀಸ್ ತರಬೇತಿ ಕೇಂದ್ರದಲ್ಲಿ ಬಾಂಬ್ ಸ್ಫೋಟ; 65 ಮಂದಿ ಸಾವು,
Update: 2016-01-07 18:02 IST
ಲಿಬಿಯಾ, ಜ.7:ಇಲ್ಲಿನ ಝಿಲ್ಟೆನ್ ನಗರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಬಳಿ ಟ್ರಕ್ ಬಾಂಬ್ ಸ್ಫೋಟಗೊಂಡ ಪರಿಣಾಮ ವಾಗಿ 65 ಮಂದಿ ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ತರಬೇತಿ ಕೇಂದ್ರದಲ್ಲಿ ನೂತನವಾಗಿ ನೇಮಕಗೊಂಡ ನೂರಾರು ಮಂದಿ ಪೊಲೀಸರು ತರಬೇತಿ ಪಡೆಯುತ್ತಿದ್ದರು.