×
Ad

ತಿವಾರಿಗೆ ಕೆಲಸವಿಲ್ಲದಿದ್ದರೆ ನನ್ನ ಪುಸ್ತಕ ಓದಲಿ: ಸಚಿವ ವಿ.ಕೆ. ಸಿಂಗ್‌

Update: 2016-01-10 13:27 IST

ಹೊಸದಿಲ್ಲಿ, ಜ.10: ಮೂರು ವರ್ಷಗಳ ಹಿಂದೆ "ಸೇನಾ ಕ್ರಾಂತಿ ಯತ್ನ ನಡೆದಿತ್ತು" ಎಂದು ಮಾಜಿ ಸಚಿವ ಮನೀಶ್‌ ತಿವಾರಿ ಹೇಳಿಕೆಯನ್ನು ಅಲ್ಲಗೆಳೆದಿರುವ  ಕೇಂದ್ರ ಸಚಿವರೂ ಆಗಿರುವ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ " ತಿವಾರಿ ಹೇಳುತ್ತಿರುವುದು ಸುಳ್ಳು. ಅವರಿಗೇ ಬೇರೇನು ಕೆಲಸವಿಲ್ದಿದ್ದರೆ ನಾನೊಂದು ಪುಸ್ತಕ ಬರೆದಿರುವೆ ಅದನ್ನು ಅವರು ಓದಲಿ" ಎಂದು ಪ್ರತಿಕ್ರಿಯಿಸಿದ್ದಾರೆ.
2012ರಲ್ಲಿ  ನಾನು ರಕ್ಷಣಾ ಸ್ಥಾಯಿ ಸಮಿತಿಯಲ್ಲಿದ್ದೆ ಆಗ ಸೇನಾ ಕ್ರಾಂತೀಯ ಯತ್ನ ನೆದಿತ್ತು. ಇದು ನಿಜಕ್ಕೂ ದುರದೃಷ್ಟಕರ.ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿ ನಿಜ . ಆದರೆ ನಾನು ಈ ವಿವಾದವನ್ನು ಬೆಳೆಸಲು ಬಯಸುತ್ತಿಲ್ಲ" ಎಂದು ತಿವಾರಿ  ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದರು.
 2012ರ ಜನವರಿ 16ರ ರಾತ್ರಿ ಸೇನಾ ಕ್ರಾಂತಿ ಯತ್ನ ನಡೆದಿತ್ತು. ಸೇನೆಯ ಅನಿರೀಕ್ಷಿತ  ಚಲನವಲನದ ಕುರಿತು ಕೇಂದ್ರೀಯ ಗುಪ್ತಚರ ಸಂಸ್ಥೆಗಳು ವರದಿ ಮಾಡಿರುವುದಾಗಿ ಎ.4, 2012ರಲ್ಲಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು. ಈ ವರದಿಯನ್ನು ಅಲ್ಲಗೆಳೆದಿರುವ  ಸಚಿವ ವಿ.ಕೆ.ಸಿಂಗ್‌   ಮನಿಶ್ ತಿವಾರಿ ಅವರಿಗೆ ಇತ್ತೀಚಿಗೆ ಮಾಡಲು ಏನೂ ಕೆಲಸವಿಲ್ಲದಂತೆ ಕಣುತ್ತದೆ. ಅವರಿಗೆ ಕೆಲಸವಿಲ್ಲದಿದ್ದರೆ  ಈ ಬಗ್ಗೆ  ನಾನು ಇತ್ತೀಚೆಗೆ ಪುಸ್ತಕವೊಂದನ್ನು ಬರೆದಿರುವೆ. ಅದನ್ನವರಿಗೆ ಓದಲು ಹೇಳಿ. ಆಗ ಅವರಿಗೆ ವಾಸ್ತವ   ಏನು ಎಂದು ಅರಿವಾಗುತ್ತದೆ " ಎಂದು ಸಿಂಗ್ ಅವರು ಹೇಳಿದ್ದಾರೆ.
೨೦೧೨ರಲ್ಲಿ ವಿ.ಕೆ.ಸಿಂಗ್ ಸೇನಾ ಮುಖ್ಯಸ್ಥರಾಗಿದ್ಧಾಗ ಜನ್ಮ ದಿನಾಂಕದ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. 2012ರ ಜನವರಿ 16ರಂದು ಸುಪ್ರೀಮ್‌ಕೋರ್ಟ್‌ ಮೆಟ್ಟಲೇರಿದ್ದರು. ಅದೇ ದಿನ ರಾತ್ರಿ . ವಿ.ಕೆ.ಸಿಂಗ್ ಅವರ ಸೂಚನೆಯ ಮೇರೆಗೆ ಹರಿಯಾಣದ ಹಿಸ್ಸಾರ್‌ನಿಂದ ಸೇನಾ ತುಕಡಿಯನ್ನು ರಾಷ್ಟ್ರ ರಾಜಧಾನಿಗೆ ಬರುವಂತೆ  ಸೂಚಿಸಿದ್ದರು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News