×
Ad

ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಉಳ್ಳಾಲ ತಂಙಳ್: ಎ.ಪಿ.ಉಸ್ತಾದ್

Update: 2016-01-15 21:33 IST

ಎಟ್ಟಿಕ್ಕುಲಂ, ಜ.15: ಸುನ್ನತ್ ಜಮಾಅತ್‌ನ ಆದರ್ಶವನ್ನು ತನ್ನ ಜೀವನದ ಪೂರ್ಣ ಸಮಯ ಕ್ರಮಬದ್ಧವಾಗಿ ಮೈಗೂಡಿಸಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಧಾರ್ಮಿಕ-ಲೌಕಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಹೇಳಿದರು.
ಎಟ್ಟಿಕ್ಕುಲಂನಲ್ಲಿ ತಾಜುಲ್ ಉಲಮಾ 2ನೆ ಉರೂಸ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  

ಸೈಯದ್ ಇಬ್ರಾಹೀಂ ಖಲೀಲ್ ತಂಙಳ್ ಕಡಲುಂಡಿ ದುಆ ನೆರವೇರಿಸಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಜಿಫ್ರಿ ಮುತ್ತುಕೋಯ ತಂಙಳ್, ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಬಾಫಕಿ ತಂಙಳ್ ಕೊಯಿಲಾಂಡಿ, ಕೂರ ತಂಙಳ್ ಇಂಬಿಚ್ಚಿಕೋಯ ತಂಙಳ್, ಅತ್ತಾವುಲ್ಲಾ ತಂಙಳ್, ಉಜಿರೆ ತಂಙಳ್, ಸಿ.ಟಿ.ಎಮ್. ತಂಙಳ್ ಕೆ.ಸಿ. ರೋಡು, ಪೊನ್ಮಲ ಉಸ್ತಾದ್, ಅಲಿಕುಂಞಿ ಉಸ್ತಾದ್, ಬೇಕಲ್ ಉಸ್ತಾದ್, ಪೆರೋಡ್ ಉಸ್ತಾದ್, ಮಾಣಿ ಉಸ್ತಾದ್, ಮಂಜನಾಡಿ ಉಸ್ತಾದ್, ಮಂಚಿ ಉಸ್ತಾದ್, ಯು.ಟಿ. ಖಾದರ್, ವೈ. ಅಬ್ದುಲ್ಲ ಕುಂಞಿ, ಎಸ್. ಎಮ್. ರಶೀದ್ ಹಾಜಿ, ಯು.ಎಸ್. ಹಂಝ ಹಾಜಿ, ಅಶ್ರಫ್ ರೈಟ್ ವೇ, ಮುಹಮ್ಮದ್ ಹಾಜಿ, ಎಮ್.ಎಸ್.ಎಮ್ ಝೈನಿ ಕಾಮಿಲ್, ಕೆ.ಎಮ್. ಸಿದ್ದೀಕ್ ಮೋಂಟುಗೋಳಿ, ಸಿರಾಜ್ ಸಖಾಫಿ ಕನ್ಯಾನ, ಹಾಫಿಳ್ ಮಜೀದ್ ಸಖಾಫಿ ಪಾಣೆಮಾರ್, ಸಾಮಣಿಗೆ ಮುಹಮ್ಮದ್ ಮದನಿ, ಅಬೂಸುಫಿಯಾನ್ ಮದನಿ, ಗೋಲ್ಡನ್ ಪುತ್ತಾಜಿ, ಕೆ.ಇ. ಅಬ್ದುಲ್ ಖಾದರ್ ರಝ್ವಿ, ಗುಲಾಂ ಮುಹಮ್ಮದ್ ಹಾಜಿ, ಕೂರ ಅಬೂಬಕರ್ ಹಾಜಿ, ಲಂಡನ್ ಮುಹಮ್ಮದ್ ಹಾಜಿ, ಎಸ್.ಕೆ. ಖಾದರ್ ಹಾಜಿ ಹಾಗೂ ಕೇರಳ ಕರ್ನಾಟಕದ ಹಲವಾರು ಉಲಮಾ, ಉಮಾರರು ಭಾಗವಹಿಸಿದರು. ಉರೂಸ್ ಕಾರ್ಯಕ್ರಮದಲ್ಲಿ ಬುರ್ದಾ ಮಜ್ಲಿಸ್, ಮಾಲೆ, ಮೌಲಿದ್ ಪಾರಾಯಣ, ಮತ ಪ್ರವಚನ, ಹದೀಸ್ ಕ್ಲಾಸ್, ನಸೀಹತಿ ಮಜ್ಲಿಸ್, ದಿಕ್ರ್ ಮಜ್ಲಿಸ್ ಅಧ್ಯಾತ್ಮಿಕ ಸಂಗಮ, ಜಮಾಅತ್ ಸಂಗಮವು ಹಿರಿಯ ವಿದ್ವಾಂಸರಿಂದ ನೆರವೇರಿತು. ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News