ಜಗತ್ತಿನ ಅತಿ ಹಿರಿಯ ಪುರುಷ ನಿಧನ

Update: 2016-01-19 14:24 GMT

ಟೋಕಿಯೊ, ಜ. 19: ಜಗತ್ತಿನ ಅತ್ಯಂತ ಹಿರಿಯ ಪುರುಷ 112 ವರ್ಷ ಪ್ರಾಯದ ಯಸುಟಾರೊ ಕೊಯಿಡೆ ಮಧ್ಯ ಜಪಾನ್‌ನ ನಗೋಯದಲ್ಲಿ ಮಂಗಳವಾರ ನಿಧನರಾದರು.

ರೈಟ್ ಸಹೋದರರು ತಮ್ಮ ಚೊಚ್ಚಲ ಯಶಸ್ವಿ ವಿಮಾನ ಹಾರಾಟವನ್ನು ನಡೆಸಿದ ಕೆಲವೇ ತಿಂಗಳುಗಳ ಮೊದಲು ಜನಿಸಿದ ಕೊಯಿಡೆ ನಗೋಯದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಈ ನಗರದಲ್ಲಿ ಅವರು ಹಲವು ವರ್ಷಗಳ ಕಾಲ ವಾಸವಿದ್ದರು.

112 ವರ್ಷದ ಅವರನ್ನು ಕಳೆದ ವರ್ಷ ಜಗತ್ತಿನ ಅತ್ಯಂತ ಹಿರಿಯ ಪುರುಷ ಎಂಬುದಾಗಿ ಮಾನ್ಯಮಾಡಲಾಗಿತ್ತು. ಅವರಿಗಿಂತ ಕೇವಲ ಒಂದು ತಿಂಗಳು ದೊಡ್ಡವರಾಗಿದ್ದ ಇನ್ನೋರ್ವ ಜಪಾನಿ ಪುರುಷ ಮೃತಪಟ್ಟ ಬಳಿಕ ಜುಲೈಯಲ್ಲಿ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರಿದ್ದರು. ಅವರು ಹೃದಯ ವೈಫಲ್ಯ ಮತ್ತು ನ್ಯುಮೋನಿಯದಿಂದಾಗಿ ಮೃತಪಟ್ಟರು.

ವೃತ್ತಿಯಲ್ಲಿ ದರ್ಜಿ ಆಗಿದ್ದ ಅವರು 1903 ಮಾರ್ಚ್ 13ರಂದು ಜಪಾನ್‌ನ ಫುಕುಯಿ ರಾಜ್ಯದಲ್ಲಿ ಜನಿಸಿದರು.

‘‘ಅತಿ ಹೆಚ್ಚು ಕೆಲಸ ಮಾಡದಿರುವುದು ಮತ್ತು ಸಂತೋಷದಿಂದ ಇರುವುದು ದೀರ್ಘಾಯುಷ್ಯಕ್ಕೆ ದಾರಿ’’ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

ಈಗ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ 116 ವರ್ಷದ ಅಮೆರಿಕನ್ ಮಹಿಳೆ ಸುಸಾನಾ ಮುಷಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News