ಫ್ರಾನ್ಸ್: ನೀರ್ಗಲ್ಲು ಉರುಳಿ 5 ಸೈನಿಕರ ಸಾವು
Update: 2016-01-19 23:59 IST
ಪ್ಯಾರಿಸ್, ಜ. 19: ಫ್ರಾನ್ಸ್‌ನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಸೋಮವಾರ ನೀರ್ಗಲ್ಲೊಂದು ಉರುಳಿ ತಪ್ಪಲಿನ ಸವೋಯಿ ರಾಜ್ಯದಲ್ಲಿ ತರಬೇತಿ ಪಡೆಯುತ್ತಿದ್ದ ಸೇನಾ ಘಟಕವೊಂದರ ಐವರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
50 ಸೈನಿಕರ ಗುಂಪಿನಲ್ಲಿದ್ದ 11 ಮಂದಿಗೆ ನೀರ್ಗಲ್ಲು ಅಪ್ಪಳಿಸಿತು ಎಂದು ಸಮೀಪದ ಪಟ್ಟಣದ ಮೋಡನ್‌ನ ಮೇಯರ್ ಜೀನ್-ಕ್ಲಾಡ್ ರಫಿನ್ ತಿಳಿಸಿದರು. ದಿನದುದ್ದದ ಬ್ಯಾಕ್ ಕಂಟ್ರಿ ಸ್ಕೀಯಿಂಗ್ ತರಬೇತಿಯಲ್ಲಿ ಸೈನಿಕರು ನಿರತರಾಗಿದ್ದಾಗ ನೀರ್ಗಲ್ಲು ಬಡಿದಿದೆ.
2,000 ಮೀಟರ್ ಎತ್ತರದಲ್ಲಿ ಸ್ಕೀಯಿಂಗ್‌ನಲ್ಲಿ ತೊಡಗಿದ್ದಾಗ ಮಧ್ಯಾಹ್ನ ಎರಡು ಗಂಟೆಗೆ ದುರಂತ ಸಂಭವಿಸಿದೆ.