ವಾಟ್ಸ್ಆ್ಯಪ್ ಅಡ್ಮಿನ್ಗಳೇ ಎಚ್ಚರ ತಪ್ಪಿದಿರಾ ಜೋಕೆ ! ನೀವು ಪೊಲೀಸರ ಅಥಿತಿಯಾಗಬೇಕಾದೀತು!

Update: 2016-01-23 05:54 GMT

ದಿಲ್ಲಿಯಲ್ಲಿ ಅಶ್ಲೀಲ ವೀಡಿಯೋ ಹಾಕಿದವನು ಮತ್ತು ಅಡ್ಮಿನ್‌ನ ಬಂಧನ

     ಹೊಸದಿಲ್ಲಿ: ವಾಟ್ಸ್‌ಆ್ಯಪ್ ಅಡ್ಮಿನ್‌ಗಳು ಹೆಚ್ಚು ಜಾಗರೂಕತೆಯಲ್ಲಿರಬೇಕಾಗಿದೆ. ಬೇರೆ ಯಾರಾದರೂ ಏನಾದರೂ ತಪ್ಪೆಸಗಿದ್ದರೆ ಸುಮ್ಮನಿದ್ದರೆ ನೀವು ಪೊಲೀಸರ ಅತಿಥಿಯಾಗಬೇಕಾದೀತು. ಇಂತಹ ಯಾವುದಾದರೂ ವಿಕೃತಿಯಲ್ಲಿ ತೊಡಗಿದವರು ನಿಮ್ಮ ಗ್ರೂಪ್‌ನಲ್ಲಿದ್ದರೆ ಅವರನ್ನು ಗ್ರೂಪ್‌ನಿಂದ ಹೊರಹಾಕಬೇಕಾಗಿದೆ. ದಿಲ್ಲಿಯಲ್ಲಿ ಅಶ್ಲೀಲ ಚಿತ್ರಗಳನ್ನು ಗ್ರೂಪ್‌ನಲ್ಲಿ ಹಾಕಿದ್ದಕ್ಕಾಗಿ ಅದನ್ನು ಹಾಕಿದವನು ಮತ್ತು ಅಡ್ಮಿನಿ ಇಬ್ಬರಮೇಲೆ ಮಹಿಳಾ ವಕೀಲರೊಬ್ಬರು ನೀಡಿದ ದೂರಿನ ಪ್ರಕಾರ ಪೊಲೀಸರು ಬಂಧಿಸಿದ್ದಾರೆ ಮತ್ತು ಆನಂತರ ಜಾಮೀನು ಮೂಲಕ ಇಬ್ಬರು ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ.. ದಿಲ್ಲಿ ಸಾಕೇತ್ ಪೊಲೀಸ್ ಠಾಣೆಯಲ್ಲಿ ಯುವ ವಕೀಲೆ ದೂರಿತ್ತಿದ್ದರು. ಚಾಟ್ ಮಾಡಿದ ಮಾಹಿತಿಗಳನ್ನು ಮತ್ತು ಪೋಸ್ಟ್ ಮಾಡಿದ ಚಿತ್ರಗಳ ಸ್ಕ್ರೀನ್ ಶಾಟ್‌ಗಳನ್ನು ಸಾಕ್ಷ್ಯವಾಗಿ ಆಕೆ ಪೊಲೀಸರಿಗೆ ನೀಡಿದ್ದರು. ಈ ಪರಿಣಾಮ ಗ್ರೂಪ್ ಅಡ್ಮಿನ್ ಮನೋಜ್ ಮತ್ತು ಸದಸ್ಯ ಕುಲ್‌ದೀಪ್ ಎಂಬಿಬ್ಬರನ್ನು ಸಾಕೇತ್ ಠಾಣೆ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

 ಗ್ರೂಪ್ ಅಡ್ಮಿನ್ ಆದ ಮನೋಜ್ ಅಶ್ಲೀಲ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ಗ್ರೂಪ್‌ಗೆ ಅಪ್‌ಲೋಡ್ ಮಾಡಿರಲಿಲ್ಲ. ಆದರೆ ಗ್ರೂಪ್ ಮೆಂಬರ್ ಕುಲ್ದೀಪ್ ನಿರಂತರ ಈ ಕೆಲಸವನ್ನು ಮಾಡುತ್ತ ಬರುತ್ತಿದ್ದನೆನ್ನಲಾಗಿದೆ. ಇತರ ಗ್ರೂಪ್ ಸದಸ್ಯರು ಕುಲ್‌ದೀಪ್‌ನ ವಿಕೃತಿಯನ್ನು ಅಡ್ಮಿನ್ ಮನೋಜ್‌ನ ಗಮನಕ್ಕೆ ತಂದಿದ್ದರೂ ಅವನು ಕುಲ್‌ದೀಪ್‌ನನ್ನು ಗ್ರೂಪ್‌ನಿಂದ ಹೊರಹಾಕುವ ಗೋಜಿಗೆ ಹೋಗಿರಲಿಲ್ಲ. ಇದನು ಮನೋಜ್‌ನ ಅಪರಾಧ ಎಂದು ಪೊಲೀಸರು ಆರೋಪಿಸಿದ್ದು ಕೇಸು ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕಾನೂನು ಬಾಹಿರ ಕೆಲಸಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ತೊಡಗಿಸಿಕೊಳ್ಳುವವರನ್ನು ಹೊರ ಹಾಕುವ ಜವಾಬ್ದಾರಿ ಅಡ್ಮಿನ್‌ನದ್ದಾಗಿದೆ ಈ ಘಟನೆಯಿಂದ ಎಲ್ಲರಿಗೂ ಎಚ್ಚರಿಕೆ ರವಾನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News