ಕಾಬೂಲ್ ಬಾಂಬ್ ಸ್ಫೋಟ
Update: 2016-02-01 23:45 IST
ಕಾಬೂಲ್, ಫೆ. 1: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.
ಪೊಲೀಸ್ ಠಾಣೆಯೊಂದಕ್ಕೆ ಪ್ರವೇಶಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸಾಲಿಗೆ ಸೇರಿಕೊಂಡ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡನು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮೃತಪಟ್ಟವರು ಹಾಗೂ ಗಾಯಗೊಂಡವರ ಪೈಕಿ ಹೆಚ್ಚಿನವರು ನಾಗರಿಕರು ಎಂದು ಉಪ ಆಂತರಿಕ ಸಚಿವ ಅಯ್ಯೂಬ್ ಸಾಲಂಗಿ ಟ್ವಿಟರ್‌ನಲ್ಲಿ ಘೋಷಿಸಿದರು.
ಹೇಳಿಕೆಯೊಂದರಲ್ಲಿ ದಾಳಿಯ ಹೊಣೆ ಹೊತ್ತಿರುವ ತಾಲಿಬಾನ್, ದಾಳಿಯಲ್ಲಿ 40 ಪೊಲೀಸ್ ಅಧಿಕಾರಿಗಳು ಸತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದೆ.