ಸೌದಿ, ಇರಾನ್‌ಗೆ ಮೂನ್ ಕರೆ
Update: 2016-02-01 23:46 IST
ದುಬೈ, ಫೆ. 1: ಸೌದಿ ಅರೇಬಿಯ ಮತ್ತು ಇರಾನ್‌ಗಳು ರಾಜಿ ಮಾಡಿಕೊಂಡು ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ನಿವಾರಿಸಲು ಸಹಾಯ ಮಾಡಬೇಕು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಸೋಮವಾರ ಈ ಎರಡು ದೇಶಗಳಿಗೆ ಕರೆ ನೀಡಿದ್ದಾರೆ.
‘‘ಇರಾನ್ ಮತ್ತು ಸೌದಿ ಅರೇಬಿಯಗಳೆರಡೂ, ತಮ್ಮ ನಡುವಿನ ಅಪನಂಬಿಕೆಗಳ ಹೊರತಾಗಿಯೂ ವಲಯದ ಉದ್ವಿಗ್ನತೆಯನ್ನು ನಿವಾರಿಸುವುದಕ್ಕಾಗಿ ರಾಜಿ ಮಾಡಿಕೊಳ್ಳು ಮುಂದಾಗಬೇಕು’’ ಎಂದು ಒಮನ್ ರಾಜಧಾನಿ ಮಸ್ಕತ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಬಾನ್ ಹೇಳಿದ್ದಾರೆ.