ಲೈಂಗಿಕವಾಗಿ ಹರಡಿದ ಝಿಕಾ ವೈರಸ್
Update: 2016-02-03 23:54 IST
ಡಲ್ಲಾಸ್, ಫೆ. 3: ಅಮೆರಿಕದ ಟೆಕ್ಸಾಸ್‌ನ ವ್ಯಕ್ತಿಯೊಬ್ಬರು ಲೈಂಗಿಕ ಸಂಪರ್ಕದ ಮೂಲಕ ಝಿಕಾ ವೈರಸ್‌ನ ಸೋಂಕಿಗೊಳಗಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಅಮೆರಿಕದಲ್ಲಿ ಝಿಕಾ ವೈರಸ್‌ನ ಸೋಂಕು ಹರಡಿದ ಮೊದಲ ಪ್ರಕರಣ ಇದಾಗಿದೆ.
ಈ ವ್ಯಕ್ತಿಯು ಹೊರ ದೇಶಕ್ಕೆ ಪ್ರಯಾಣಿಸಿಲ್ಲ. ಆದರೆ, ವೆನೆಝುವೆಲದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಹಾಗೂ ಈಗ ಝಿಕಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಡಲ್ಲಾಸ್ ಕೌಂಟಿಯ ಆರೋಗ್ಯ ಅಧಿಕಾರಿಗಳು ತಿಳಿಸಿದರು.