×
Ad

ಕುಳಿತುಕೊಂಡಷ್ಟೂ ಮಧುಮೇಹ ಸಾಧ್ಯತೆ ಹೆಚ್ಚು: ಅಧ್ಯಯನ

Update: 2016-02-05 22:24 IST

ಲಂಡನ್, ಫೆ. 5: ಎಚ್ಚರ! ನೀವು ದಿನದಲ್ಲಿ ಎಷ್ಟು ಕುಳಿತುಕೊಳ್ಳುತ್ತೀರೋ ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಯೂ ಅಷ್ಟು ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

ನೆದರ್‌ಲ್ಯಾಂಡ್ಸ್‌ನ ಮಾಸ್ಟ್ರಿಕ್ಟ್ ವಿಶ್ವವಿದ್ಯಾನಿಲಯದ ಜೂಲಿಯನ್ ವಾನ್ ಡರ್ ಬರ್ಗ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನವು, ಚಟುವಟಿಕೆರಹಿತವಾಗಿ ಕಳೆಯುವ ಅವಧಿ ಹೆಚ್ಚಿದಷ್ಟೂ ದೇಹದಲ್ಲಿ ಸಂಗ್ರಹಗೊಳ್ಳುವ ಸಕ್ಕರೆ ಅಂಶವೂ ಹೆಚ್ಚುತ್ತದೆ ಎಂದು ಎಚ್ಚರಿಸಿದೆ.

ದಿನವೊಂದರ ಸಾಮಾನ್ಯ ಚಟವಟಿಕೆ ರಹಿತ ಅವಧಿಗೆ ಹೆಚ್ಚುವರಿಯಾಗಿ (ಉದಾಹರಣೆಗೆ ಕಂಪ್ಯೂಟರ್ ಎದುರು ಕುಳಿತುಕೊಳ್ಳುವುದು) ಕುಳಿತುಕೊಳ್ಳುವ ಪ್ರತಿ ಗಂಟೆಗೆ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ 22 ಶೇಕಡದಷ್ಟು ಹೆಚ್ಚುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News