×
Ad

ಕಳ್ಳಭಟ್ಟಿ ಕುಡಿದು 26 ಸಾವು

Update: 2016-02-08 23:30 IST

ಜಕಾರ್ತ, ಫೆ. 8: ಇಂಡೋನೇಶ್ಯದ ಜಾವದಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಯೋಗ್ಯಕರ್ತ ನಗರದ ಸಮೀಪದ ಪಟ್ಟಣವೊಂದರಲ್ಲಿ ದಂಪತಿಯೊಂದು ಮನೆಯಲ್ಲೇ ತಯಾರಿಸಿದ ಕಳ್ಳಭಟ್ಟಿಯನ್ನು ಕುಡಿದವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೃತರ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News