×
Ad

ಯಾವ ಕಾನೂನಿನಡಿ ಪಾಕ್‌ಗೆ ಕೊಹಿನೂರ್?

Update: 2016-02-11 23:32 IST

ಲಾಹೋರ್, ಫೆ. 11: ಬ್ರಿಟನ್‌ನಲ್ಲಿರುವ ಪ್ರಸಿದ್ಧ ಕೊಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಪಾಕಿಸ್ತಾನ ಯಾವ ಕಾನೂನಿನಡಿಯಲ್ಲಿ ಬ್ರಿಟನ್‌ಗೆ ಕೋರಿಕೆ ಸಲ್ಲಿಸಬಹುದು ಎಂದು ಎರಡು ವಾರಗಳಲ್ಲಿ ತಿಳಿಸುವಂತೆ ಲಾಹೋರ್ ಹೈಕೋರ್ಟ್ ಇಂದು ಅರ್ಜಿದಾರರಿಗೆ ಸೂಚಿಸಿತು.
ಕೊಹಿನೂರ್ ವಜ್ರ ಪಾಕಿಸ್ತಾನದ ಸೊತ್ತಾಗಿದ್ದು, ಬ್ರಿಟನ್‌ನ ಅಕ್ರಮ ವಶದಲ್ಲಿದೆ ಎಂಬುದಾಗಿ ಅರ್ಜಿದಾರ ಬ್ಯಾರಿಸ್ಟರ್ ಜಾವೇದ್ ಇಕ್ಬಾಲ್ ಜಾಫ್ರಿ ನ್ಯಾಯಾಲಯಕ್ಕೆ ಹೇಳಿದರು.
ಕೊಹಿನೂರ್ ವಜ್ರವನ್ನು ಬ್ರಿಟನ್‌ನಿಂದ ವಾಪಸ್ ಪಡೆಯಲು ಭಾರತ ವರ್ಷಗಳಿಂದ ಪ್ರಯತ್ನಿಸುತ್ತಿದೆ.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಾಧೀಶ ಖಾಲಿದ್ ಮಹ್ಮೂದ್ ಖಾನ್, ವಜ್ರವನ್ನು ಹಿಂದಿರುಗಿಸುವಂತೆ ಯಾವ ಕಾನೂನಿನಡಿ ಪಾಕಿಸ್ತಾನ ಸರಕಾರ ಬ್ರಿಟನ್ ಸರಕಾರಕ್ಕೆ ಕೋರಿಕೆ ಸಲ್ಲಿಸಬಹುದು ಎಂದು ಹೇಳುವಂತೆ ಸೂಚಿಸಿದರು.

ವಜ್ರವನ್ನು ಭಾರತಕ್ಕೆ ನೀಡಲು ಬ್ರಿಟನ್ ಸರಕಾರ ನಿರಾಕರಿಸಿದೆ. ಈಗ ಪಾಕಿಸ್ತಾನ ಇದಕ್ಕೆ ಬೇಡಿಕೆ ಸಲ್ಲಿಸಬೇಕು. ಯಾಕೆಂದರೆ, ವಜ್ರವನ್ನು ಪಡೆಯುವ ಮೊದಲದ ಹಕ್ಕು ಇರುವುದು ಪಾಕಿಸ್ತಾನಕ್ಕೆ. ಅದನ್ನು ವಾಪಸ್ ತರುವುದು ಪಾಕಿಸ್ತಾನ ಸರಕಾರದ ಕರ್ತವ್ಯ.    -ಅರ್ಜಿದಾರರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News