×
Ad

ಸೌದಿ: ಶಿಕ್ಷಕನಿಂದ 6 ಸಹೋದ್ಯೋಗಿಗಳ ಹತ್ಯೆ

Update: 2016-02-11 23:43 IST

ರಿಯಾದ್, ಫೆ. 11: ದಕ್ಷಿಣ ಸೌದಿ ಅರೇಬಿಯದ ಜಝನ್ ರಾಜ್ಯದ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ಗುರುವಾರ ತನ್ನ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಆದರೆ, ಈ ಘಟನೆಗೆ ಕಾರಣವೇನು ಎಂಬ ಬಗ್ಗೆ ಟಿವಿ ಯಾವುದೇ ವಿವರಣೆ ನೀಡಿಲ್ಲ. ಶಾಲೆಯ ಹೊರಗೆ ಆ್ಯಂಬುಲೆನ್ಸ್‌ಗಳು ನಿಂತಿರುವುದನ್ನು ಟಿವಿಯಲ್ಲಿ ತೋರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News