ಮೆಕ್ಸಿಕೊ ಜೈಲಿನಲ್ಲಿ ಮಾರಾಮಾರಿ: 49 ಸಾವು
Update: 2016-02-12 23:55 IST
ಮಾಂಟರೇ (ಮೆಕ್ಸಿಕೊ), ಫೆ. 12: ಉತ್ತರ ಮೆಕ್ಸಿಕೊದ ಜೈಲೊಂದರಲ್ಲಿ ಗುರುವಾರ ಕೈದಿಗಳು ಬ್ಯಾಟ್‌ಗಳು ಮತ್ತು ಬ್ಲೇಡ್‌ಗಳಿಂದ ಪರಸ್ಪರ ಹೊಡೆದಾಡಿಕೊಂಡರು ಹಾಗೂ ಬೆಂಕಿ ಹಚ್ಚಿದರು. ಮೆಕ್ಸಿಕೊದ ಜೈಲೊಂದರಲ್ಲಿ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ರಕ್ತಪಾತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ.
ಕೈಗಾರಿಕಾ ನಗರ ಮಾಂಟರೇಯ ಟೊಪೊ ಚಿಕೊ ಜೈಲಿನಲ್ಲಿ 30ರಿಂದ 40 ನಿಮಿಷಗಳ ಕಾಲ ನಡೆದ ಹೊಡೆದಾಟದಲ್ಲಿ 12 ಮಂದಿ ಗಾಯಗೊಂಡರು ಎಂದು ನ್ವೇವೊ ಲಿಯೋನ್ ರಾಜ್ಯದ ರಾಜ್ಯಪಾಲ ಜೇಮ್ ರೊಡ್ರಿಗಝ್ ತಿಳಿಸಿದರು.
ಝೇಟಸ್ ಎಂಬ ಮಾದಕ ದ್ರವ್ಯ ಕೂಟದ ವಿರೋಧಿ ಬಣಗಳ ಸದಸ್ಯರ ನಡುವೆ ಜೈಲಿನ ನಿಯಂತ್ರಣ ವಿಷಯದಲ್ಲಿ ನಡೆದ ತಿಕ್ಕಾಟ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿಣಮಿಸಿತು ಎಂದು ರಾಜ್ಯಪಾಲರು ಹೇಳಿದರು.