ಮಹಿಳಾ ವೈದ್ಯೆಗೆ ಅಶ್ಲೀಲ ಸಂದೇಶ: ಬ್ರಿಟನ್‌ನ ಟೆಕ್ಕಿಯ ಬಂಧನ!
ಹೈದರಾಬಾದ್; ಮದುವೆಯನ್ನು ನಿಲ್ಲಿಸಿದ್ದಕ್ಕಾಗಿ ಮಹಿಳಾ ವೈದ್ಯರೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಟೆಕ್ಕಿಯೊಬ್ಬನನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.ಇಂಗ್ಲೆಂಡ್‌ನಲ್ಲಿ ಉದ್ಯೋಗದಲ್ಲಿರುವ ಅಶೋಕ್ ಕುಮಾರ್(40) ಎಂಬ ಕಂಪ್ಯೂಟರ್ ಇಂಜಿನಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಹಳ ದಿನಗಳಿಂದ ಅಶೋಕ್ ಕುಮಾರ್ ವೈದ್ಯೆಯೊಬ್ಬರೊಡನೆ ಆತ್ಮೀಯನಾಗಿದ್ದ. ಅವರೊಡನೆ ಮದುವೆ ಮಾಡಿಕೊಳ್ಳಲಿಕ್ಕಾಗಿ ಭಾರತಕ್ಕೆ ಬಂದಿದ್ದ. ಆದರೆ ವೈದ್ಯೆಗೂ ಆತನಿಗೂ ಭಿನ್ನಾಭಿಪ್ರಾಯ ಉಂಟಾಗಿ ಮದುವೆ ನಿಂತು ಹೋಗಿತ್ತು. ಇದರಿಂದ ಕೋಪಗೊಂಡ ಆತ ಯುವತಿಯ ಕುಟುಂಬಕ್ಕೆ ಬೈದುಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಅದನ್ನು ನಾನು ನಿರ್ಲಕ್ಷಿಸಿದ್ದೆ ಆದರೂ ಆತನಿಂದ ಬೆದರಿಕೆ ಬಂದಿದ್ದರಿಂದ ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ವೈದ್ಯೆ ಹೇಳಿದ್ದಾರೆ. ಫೋನ್ ಮತ್ತು ನಂಬರ್ ಹಾಗೂ ವಿಳಾಸವನ್ನು ಇಮೈಲ್ ಮೂಲಕ ಅವನಿಗೆ ಹಸ್ತಾಂತರಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ. ಆದರೆ ಯಾವ ಕಾರಣದಿಂದ ಮದುವೆ ಸ್ಥಗಿತಗೊಂಡಿತ್ತೆಂದು ಗೊತ್ತಾಗಿಲ್ಲ.
ಮದುವೆ ನಿಂತುಹೋಗಿದ್ದಕ್ಕೆ ಪ್ರತಿಕಾರವಾಗಿ ಆತ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಹಾಗೂ ಕೇಸನ್ನು ಅಧ್ಯಯನ ಮಾಡಿದ ಬಳಿಕ ಆತನನ್ನು ಬಂಧಿಸಲಾಗಿದೆ. ವೈದ್ಯೆಯ ಹೆಸರಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಸಂದೇಶ ರವಾನಿಸುತ್ತಿದ್ದದ್ದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.