ಸಿರಿಯದ ಅಧ್ಯಕ್ಷ ಬಶಾರ್ ಅಧಿಕಾರ ತೊರೆಯದಿದ್ದರೆ ಕಿತ್ತುಹಾಕಲಾಗುವುದು:ಸೌದಿ ವಿದೇಶ ಸಚಿವ
ಜಿದ್ದಾ: ಸಿರಿಯದಲ್ಲಿ ರಾಜಕೀಯ ಕ್ರಮಗಳು ವಿಫಲವಾದರೆ ಅಧ್ಯಕ್ಷ ಬಶಾರುಲ್ ಅಸದ್‌ರನ್ನು ಬಲಪ್ರಯೋಗಿಸಿ ಹೊರದಬ್ಬಲಾಗುವುದು ಎಂದು ಸೌದಿ ಅರಬಿಯದ ವಿದೇಶ ಸಚಿವ ಆದಿಲ್ ಜುಬೈರ್ ಹೇಳಿದ್ದಾರೆ. ಅಮೆರಿಕನ್ ಚ್ಯಾನೆಲ್‌ಸಿಎನ್‌ಎನ್ ಚೀಫ್ ಇಂಟರ್‌ನ್ಯಾಶನಲ್ ಕರಸ್ಪಾಡೆಂಟ್ ಕ್ರಿಸ್ಟಿಯನ್ ಅಮನ್‌ಫೋರ್‌ಗೆ ಮ್ಯೂನಿಚ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವರ ಕಾಲ ಮುಗಿಯಿತು. ಅವರು ದುರ್ಬಲರಾಗಿದ್ದಾರೆ ಅವರು ಅಧಿಕಾರದಿಂದ ಕೆಳಗಿಯಲೇ ಬೇಕು. ಅಥವಾ ರಾಜಕೀಯ ಕ್ರಮಗಳ ಮೂಲಕ ಅಧಿಕಾರವನ್ನು ತೊರೆಯಬೇಕು. ಅಲ್ಲದಿದ್ದರೆ ಸೇನಾ ಬಲಪ್ರಯೋಗಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ರಾಜಕೀಯ ಕ್ರಮಗಳ ಸಾಧ್ಯತೆಗಳನ್ನು ಆದಷ್ಟು ಪ್ರಯೋಗಿಸಿ ನೋಡಲಾಗುತ್ತಿದೆ. ಆದರೆ ಅದು ಯಶಸ್ವಿಯಾಗದಿದ್ದರೆ ಅವರನ್ನು ಹೊರದಬ್ಬದೆ ಬೇರೆ ಉಪಾಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಸಿರಿಯಾ ವಿಚಾರದಲ್ಲಿ ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು. ಆಕಾಶ ಯುದ್ಧದ ಮೂಲಕ ಸಾಧಿಸಲಾಗದಿರುವುದನ್ನು ಚರ್ಚೆಗಳ ಮೂಲಕ ಸಾಧಿಸಬಹುದು. ಇರಾನ್‌ನೊಂದಿಗೆ ಉತ್ತಮ ಸಂಬಂಧವಿರಿಸಲು ಸೌದಿ ಬಯಸುತ್ತಿದೆ. ಆದರೆ ಇರಾನ್‌ನಿಂದ ಪೂರಕ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಕಳೆದ 35 ವರ್ಷಗಳಿಂದ ವಲಯದಲ್ಲಾದ ಘಟನೆಗಳಹಿಂದೆ ಇರಾನ್‌ನ ಹಸ್ತವಿದೆ ಎಂದು ಅವರು ಆರೋಪಿಸಿದ್ದಾರೆ.