×
Ad

ಸಿಂಧ್‌ನಲ್ಲಿ ಹಿಂದೂ ವಿವಾಹ ಕಾಯ್ದೆ ಜಾರಿ

Update: 2016-02-15 23:59 IST

ಇಸ್ಲಾಮಾಬಾದ್, ಫೆ.15: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಸೆಂಬ್ಲಿಯು ಮಂಗಳವಾರ ಹಿಂದೂ ವಿವಾಹ ವಿಧೇಯಕವನ್ನು ಅಂಗೀಕರಿಸಿದೆ. ಇದರೊಂದಿಗೆ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರು ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡಿದ, ಪಾಕಿಸ್ತಾನದ ಪ್ರಪ್ರಥಮ ಪ್ರಾಂತವೆನಿಸಿಕೊಂಡಿದೆ.
 ಸಿಂಧ್ ಅಸೆಂಬ್ಲಿಯಲ್ಲಿ ಈ ಮಹತ್ವದ ವಿಧೇಯಕವನ್ನು ಸಂಸದೀಯ ವ್ಯವಹಾರಗಳ ಸಚಿವ ನಿಸಾರ್ ಖುಹ್ರೊ ಮಂಡಿಸಿದರು. ಈ ಕಾಯ್ದೆಯು ಹಿಂದೂಗಳು ಗಣನೀಯ ಸಂಖ್ಯೆಯಲ್ಲಿರುವ ಸಮಗ್ರ ಸಿಂಧ್ ಪ್ರಾಂತಕ್ಕೆ ಅನ್ವಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News