ಇರಾನ್‌ನಲ್ಲಿ ಸೌದಿ ಪ್ರತಿನಿಧಿಯಾಗಿ ಸ್ವಿಝರ್‌ಲ್ಯಾಂಡ್
ರಿಯಾದ್, ಫೆ. 15: ಇರಾ್ಲ್ಲಿನ ತನ್ನ ದೇಶದ ರಾಜತಾಂತ್ರಿಕ ಸೇವೆಗಳನ್ನು ನಿಭಾಯಿಸಿಕೊಂಡು ಹೋಗಲು ಸ್ವಿಝರ್‌ಲ್ಯಾಂಡ್ ಒಪ್ಪಿಕೊಂಡಿದೆ ಎಂದು ಸೌದಿ ಅರೇಬಿಯ ವಿದೇಶ ಸಚಿವರು ಹೇಳಿದ್ದಾರೆ. ಈ ವ್ಯವಸ್ಥೆಯಿಂದ ಸೌದಿ ಅರೇಬಿಯಕ್ಕೆ ಭೇಟಿ ನೀಡಬಯಸುವ ಇರಾನ್ ಪ್ರಜೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ತಿಂಗಳು ಇರಾನ್ ಮತ್ತು ಸೌದಿ ಅರೇಬಿಯ ನಡುವಿನ ಸಂಘರ್ಷ ತಾರಕಕ್ಕೇರಿ ಇರಾನ್‌ನಲ್ಲಿನ ತನ್ನ ರಾಯಭಾರ ಕಚೇರಿಯನ್ನು ಸೌದಿ ಅರೇಬಿಯ ಮುಚ್ಚಿತ್ತು. ಸೌದಿ ಅರೇಬಿಯದಲ್ಲಿ ಪ್ರಭಾವಿ ಶಿಯಾ ಧಾರ್ಮಿಕ ಮುಖಂಡರೊಬ್ಬರನ್ನು ಗಲ್ಲಿಗೇರಿಸಿರುವುದನ್ನು ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರು ಸೌದಿ ರಾಯಭಾರ ಕಚೇರಿ ಮತ್ತು ಇನ್ನೊಂದು ರಾಜತಾಂತ್ರಿಕ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸೌದಿ, ಇರಾನ್‌ನಲ್ಲಿನ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತ್ತು.
ಅಮೆರಿಕ, ಬಿ್ರಟನ್ ಹೊರತುಪಡಿಸಿ ಎಲ್ಲರಿಗೂ ‘ಬಂದ ಬಳಿಕ ವೀಸಾ’
ಟೆಹರಾನ್, ಫೆ. 15: ಬಿ್ರಟನ್, ಅಮೆರಿ ಮತ್ತು ಇತರ ಏಳು ದೇಶಗಳನ್ನು ಹೊರತುಪಡಿಸಿ, ಎಲ್ಲ ದೇಶಗಳ ನಾಗರಿಕರಿಗೆ ಇರಾನ್‌ನ ವಿಮಾನ ನಿಲ್ದಾಣಗಳಿಗೆ ಬಂದ ಬಳಿಕ ವೀಸಾ ನೀಡುವುದಾಗಿ ಇರಾನ್ ಸೋಮವಾರ ಘೋಷಿಸಿದೆ. ದೇಶದಲ್ಲಿ ಪ್ರವಾಸೋದ್ದಿಮೆಯನ್ನು ಉತ್ತೇಜಿಸುವುದಕ್ಕಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ವಿದೇಶ ಸಚಿವಾಲಯದ ವಕ್ತಾರರು ತಿಳಿಸಿದರು. ಇತರ 7 ದೇಶಗಳ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.