ಅಂಗೋಲ: ಬೃಹತ್ ವಜ್ರ ಪತ್ತೆ
Update: 2016-02-16 23:45 IST
ಲುವಾಂಡ (ಅಂಗೋಲ), ಫೆ. 16: ಏಳು ಸೆಂಟಿ ಮೀಟರ್‌ಗೂ ಅಧಿಕ ಉದ್ದದ 404 ಕ್ಯಾರಟ್ ವಜ್ರವೊಂದನ್ನು ಅಂಗೋಲದ ಗಣಿಯೊಂದರಿಂದ ಹೊರತೆಗೆಯಲಾಗಿದೆ ಎಂದು ಆಸ್ಟ್ರೇಲಿಯದ ಗಣಿ ಕಂಪೆನಿಯೊಂದು ಹೇಳಿದೆ.
ವಜ್ರದ ವೌಲ್ಯ ಸುಮಾರು 98 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದು ಅಂಗೋಲದಲ್ಲಿ ಈವರೆಗೆ ಸಿಕ್ಕಿದ ವಜ್ರಗಳಲ್ಲೇ ಅತ್ಯಂತ ದೊಡ್ಡದು ಹಾಗೂ ಜಗತ್ತಿನ 27ನೆ ಅತ್ಯಂತ ದೊಡ್ಡ ವಜ್ರವೆಂದು ಹೇಳಲಾಗಿದೆ.