×
Ad

81 ವರ್ಷದ ದಾಂಪತ್ಯ: ದಂಪತಿಗೆ ನ್ಯೂಝಿಲ್ಯಾಂಡ್‌ನಲ್ಲಿ ಸನ್ಮಾನ

Update: 2016-02-16 23:50 IST

ಆಕ್ಲಂಡ್, ಫೆ. 16: ಸುಮಾರು 81 ವರ್ಷಗಳ ಕಾಲ ದಾಂಪತ್ಯ ನಡೆಸಿರುವ ಭಾರತೀಯ ಮೂಲದ ದಂಪತಿಯನ್ನು ನ್ಯೂಝಿಲ್ಯಾಂಡ್‌ನ ಕ್ರೈಸ್ತ ಸಂಘಟನೆಯೊಂದು ಸನ್ಮಾನಿಸಿದೆ. ಇದು ನ್ಯೂಝಿಲ್ಯಾಂಡ್‌ನ ಅತ್ಯಂತ ಸುದೀರ್ಘ ಕಾಲ ಜೊತೆಯಾಗಿರುವ ದಂಪತಿ ಎಂದು ಬಣ್ಣಿಸಲಾಗಿದೆ.
ಆಕ್ಲಂಡ್ ನಿವಾಸಿಗಳಾದ ಜೇರಂ ರಾವ್‌ಜಿ ಮತ್ತು ಗಂಗಾ ಗಂಗಾ ರಾವ್‌ಜಿ ಈ ವರ್ಷದ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಕ್ರಮವಾಗಿ 100ನೆ ವರ್ಷಕ್ಕೆ ಕಾಲಿಡಲಿದ್ದಾರೆ. ಅವರು ಭಾರತದ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದರು.
ಅವರು ಇನ್ನು ಎರಡು ತಿಂಗಳಲ್ಲಿ ತಮ್ಮ 81ನೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.
ಅವರಿಗೆ 6 ಮಕ್ಕಳು, 15 ಮೊಮ್ಮಕ್ಕಳು ಮತ್ತು 25 ಮರಿಮೊಮ್ಮಕ್ಕಳು ಇದ್ದಾರೆ. ಎಲ್ಲರೂ ಆಕ್ಲಂಡ್‌ನಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News