ನೈಜರ್: 20 ಲಕ್ಷ ಜನರಿಗೆ ಆಹಾರ ನೆರವಿನ ಅಗತ್ಯ

Update: 2016-02-18 17:44 GMT

ನಿಯಾಮಿ (ನೈಜರ್), ಫೆ. 18: ಪಶಿ್ಚಮ ಆಫ್ರಿಕದ ದೇಶ ನೈಜರ್‌ನಲ್ಲಿ ಈ ಬಾರಿ ಉತ್ತಮ ಬೆಳೆಯಾಗಿದ್ದರೂ, 20 ಲಕ್ಷ ಜನರಿಗೆ ತುರ್ತು ಆಹಾರದ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.
ನೆರೆಯ ದೇಶಗಳ ನಿರಾಶ್ರಿತರು ಸೇರಿದಂತೆ ಸುಮಾರು 15 ಲಕ್ಷ ಜನರಿಗೆ ನೆರವು ಸಂಘಟನೆಗಳು ಸಹಾಯ ಮಾಡಲಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್‌ಎ) ಹೇಳಿದೆ. ನೆರವಿನ ಅಗತ್ಯವಿರುದ ಇನ್ನು 5 ಲಕ್ಷ ಮಂದಿಗೆ ನೆರವು ನೀಡುವುದಾಗಿ ನೈಜೀರಿಯ ಸರಕಾರ ಘೋಷಿಸಿದೆ.
ತಮ್ಮ ನೆರವು ಕಾರ್ಯಾಚರಣೆಗಳಿಗಾಗಿ 147 ಮಿಲಿಯ ಡಾಲರ್ (ಸುಮಾರು 1,005 ಕೋಟಿ ರೂಪಾಯಿ) ಮೊತ್ತದ ಅಗತ್ಯವಿದೆ ಎಂಬುದಾಗಿ ಸರಕಾರೇತರ ಸಂಘಟನೆಗಳು ಹೇಳಿವೆ. ಆದರೆ, ಫೆಬ್ರವರಿ 15ರ ವೇಳೆಗೆ, ಈ ಮೊತ್ತದ 2.5 ಶೇಕಡ ಮಾತ್ರ ಸಂಗ್ರಹವಾಗಿದೆ’’ ಎಂದು ವಿಶ್ವಸಂಸ್ಥೆಯ ಘಟಕ ಸಂಸ್ಥೆ ಹೇಳಿದೆ.
ನೈಜರ್‌ನಲ್ಲಿ ಈ ವರ್ಷ 88,000 ಟನ್ ಹೆಚ್ಚುವರಿ ದವಸ ಧಾನ್ಯ ಬೆಳೆದ ಹೊರತಾಗಿಯೂ ಈ ಸಮಸ್ಯೆ ತಲೆದೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News