ಜೆಎನ್‌ಯು: ಬಾಂಬೆ ಐಐಟಿ ಪ್ರಾಧ್ಯಾಪಕರ ಬೆಂಬಲ
ಮುಂಬೈ, ಫೆ.19: ಸರಕಾರವು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸಿ, ಭಿನ್ನಮತ ಮತ್ತು ಅಭಿಪ್ರಾಯ ಭೇದಗಳನ್ನು ದಮನಿಸಲು ಯತ್ನಿಸುತ್ತಿದೆಯೆಂದು ಆರೋಪಿಸಿರುವ ಐಐಟಿ ಬಾಂಬೆಯ ಪ್ರಾಧ್ಯಾಪಕರು, ರಾಷ್ಟ್ರೀಯತೆಯ ಅರ್ಥವನ್ನು ಸರಕಾರವು ಹೇರಬಾರದೆನ್ನುವ ಮೂಲಕ, ಪ್ರತಿಭಟನೆ ನಿರತ ಜೆಎನ್‌ಯು ವಿದ್ಯಾರ್ಥಿಗಳ ಬೆಂಬಲಕ್ಕೆ ಮುಂದೆ ಬಂದಿದ್ದಾರೆ.
ಭಾರತೀಯನಾಗಿರುವುದು ಎಂಬುದರ ಅನೇಕ ಅರ್ಥಗಳ ಮೇಲೆ ಸರಕಾರವು ಸರ್ವಾಧಿಕಾರ ನಡೆಸಬಾರದು ಅಥವಾ ರಾಷ್ಟ್ರೀಯತೆ ಎಂಬುದರ ಅರ್ಥವನ್ನು ಕಡ್ಡಾಯಪಡಿಸಬಾರದು. ಅದರ ಬದಲು, ಮುಖ್ಯವಾಗಿ, ಪ್ರಧಾನ ಯೋಚನಾ ಮಾರ್ಗಕ್ಕೆ ಭಿನ್ನವಾಗಿರುವಾಗ, ದೇಶದೊಂದಿಗೆ ಒಬ್ಬನ ಸಂಬಂಧದ ಬಗ್ಗೆ ಕಲ್ಪನೆಯ ಬಹು ಮಾರ್ಗಗಳು ಅರಳುವುದಕ್ಕೆ ಅವಕಾಶ ನೀಡುವುದನ್ನು ಅದು ಖಚಿತಪಡಿಸಬೇಕೆಂದು ಪ್ರಾಧ್ಯಾಪಕ ವರ್ಗವು ಜಂಟಿ ಹೇಳಿಕೆಯೊಂದರಲ್ಲಿ ಅಭಿಪ್ರಾಯಿಸಿದೆ.
...........
ಆರೆಸ್ಸೆಸ್ ವಿರುದ್ಧ ಇನ್ನೊಂದು ಅರ್ಜಿ
ಆರೆಸ್ಸೆಸ್ ಹಾಗೂ ಇತರ ಉಗ್ರಗಾಮಿ ಸಂಘಟ ನೆಗಳಿಂದ ಪ್ರಚೋದಿತವಾಗಿದ್ದ ಗುಂಪೊಂದು ಫೆ,15ರಂದು ಪಾಟಿಯಾಲ ಹೌಸ್ ನ್ಯಾಯಾಲಯ ಸಂಕೀರ್ಣದಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದೆಯೆಂದು ಆರೋಪಿಸಿ, ಸುಭಾಶ್ಚಂದ್ರನ್ ಎಂಬ ವಕೀಲ ಪ್ರತ್ಯೇಕ ದೂರೊಂದನ್ನು ದಾಖಲಿಸಿದಾಗ ಪ್ರತಿಭಟನೆ ಭುಗಿಲೆದ್ದಿತು.
ಇಡೀ ಪ್ರಕರಣವು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕೆಂಬ ಉದ್ದೇಶದಿಂದ ಕನ್ಹಯ್ಯ ಕುಮಾರ್ ಹಾಗೂ ಅವರ ವಕೀಲರು ‘ಸೃಷ್ಟಿಸಿದ್ದಾಗಿದೆ’.
ಆರೆಸ್ಸೆಸ್ಸನ್ನು ಉಗ್ರಗಾಮಿ ಸಂಘಟನೆ ಎಂದು ಬಿಂಬಿಸಿರುವುದು ತನಗೆ ನೋವುಂಟು ಮಾಡಿದೆ. ಸುಭಾಶ್ಚಂದ್ರನ್‌ರ ದೂರಿನಿಂದ ಈ ಟೀಕೆಯನ್ನು ಕೈಬಿಡಬೇಕೆಂದು ಇನ್ನೊಬ್ಬ ವಕೀಲ ಆರ್.ಪಿ. ಲೂಥ್ರಾ ವಾದಿಸಿದರು.
ಆದರೆ, ಲೂಥ್ರಾರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ನ್ಯಾಯಪೀಠ, ಕೇವಲ, ಅರ್ಜಿಯನ್ನು ಹಿಂದೆಗೆದು ಅಗತ್ಯವಿದ್ದಲ್ಲಿ ಅವರ ಮೇಲೆ ನಡೆದಿದೆ ಎನ್ನಲಾದ ದಾಳಿಯ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಲಿಲ್ಲವೆಂಬುದಕ್ಕಷ್ಟೇ ಸೀಮಿತವಾಗಿ ಇನ್ನೊಂದು ದೂರು ಸಲ್ಲಿಸುವಂತೆ ಸುಭಾಶ್ಚಚಂದ್ರನ್‌ಗೆ ಸೂಚಿಸಿತು.