ದಿಲ್ಲಿ ಓಪನ್ ಟೆನಿಸ್ ಟೂರ್ನಿ: ಸಾಕೇತ್ ಮೈನೇನಿ ಫೈನಲ್‌ಗೆ
Update: 2016-02-20 23:50 IST
ಹೊಸದಿಲ್ಲಿ, ಫೆ.20: ಭಾರತದ ಯುವ ಆಟಗಾರ ಸಾಕೇತ್ ಮೈನೇನಿ ದಿಲ್ಲಿ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ 166ನೆ ರ್ಯಾಂಕಿನ ಮೈನೇನಿ ಬೆಲ್ಜಿಯಂನ ಕಿಮ್ಮರ್ ಕಾಪ್ಪೆಜನ್ಸ್‌ರನ್ನು 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮೈನೇನಿ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಎರಡನೆ ಪ್ರಶಸ್ತಿ ಜಯಿಸುವ ವಿಶ್ವಾಸ ಮೂಡಿಸಿದ್ದಾರೆ. 2014ರ ಅಕ್ಟೋಬರ್‌ನಲ್ಲಿ ಇಂದೋರ್‌ನಲ್ಲಿ ಚೊಚ್ಚಲ ಎಟಿಪಿ ಪ್ರಶಸ್ತಿ ಜಯಿಸಿದ್ದರು.
ಡಬಲ್ಸ್‌ನಲ್ಲಿ ಸನಮ್ ಸಿಂಗ್‌ರೊಂದಿಗೆ ಫೈನಲ್ ತಲುಪಿರುವ ಮೈನೇನಿಗೆ ನಾಲ್ಕನೆ ಬಾರಿ ಡಬಲ್ಸ್ ಪ್ರಶಸ್ತಿ ಜಯಿಸುವ ಅವಕಾಶವಿದೆ. ಮೈನೇನಿ ಫೈನಲ್‌ನಲ್ಲಿ ಫ್ರೆಂಚ್‌ನ 3ನೆ ಶ್ರೇಯಾಂಕದ ಸ್ಟೀಫನ್ ರಾಬರ್ಟ್‌ರನ್ನು ಎದುರಿಸಲಿದ್ದಾರೆ.