IPL ಹರಾಜು | ಅತ್ಯಂತ ದುಬಾರಿ ಟಾಪ್ 10 ವಿದೇಶಿ ಆಟಗಾರರು
Photo : x/IPL
ಅಬುಧಾಬಿ, ಡಿ.16: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಇತಿಹಾಸದಲ್ಲಿ ಆಸ್ಟ್ರೇಲಿಯದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಅತ್ಯಂತ ದುಬಾರಿ ವಿದೇಶಿ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಗ್ರೀನ್ ಅವರು ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ಗರಿಷ್ಠ ಮೊತ್ತಕ್ಕೆ ಹರಾಜಾದ ಮೂರನೇ ಆಟಗಾರ ಎನಿಸಿಕೊಂಡರು. ರಿಷಭ್ ಪಂತ್(27 ಕೋಟಿ ರೂ.)ಹಾಗೂ ಶ್ರೇಯಸ್ ಅಯ್ಯರ್(26.75 ಕೋಟಿ ರೂ.)ಅತ್ಯಂತ ದುಬಾರಿ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.
2026ರ ಆವೃತ್ತಿಯ ಐಪಿಎಲ್ ಗಾಗಿ ಮಂಗಳವಾರ ನಡೆದ ಮಿನಿ ಹರಾಜು ಪ್ರಕ್ರಿಯೆಯ ವೇಳೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡವು ಗ್ರೀನ್ ಅವರನ್ನು 25.20 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಈ ಹಿಂದೆ 2024ರಲ್ಲಿ ಕೆಕೆಆರ್ ತಂಡವೇ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತ್ತು. ಆಗ ಸ್ಟಾರ್ಕ್ ಅವರು ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದರು. ಪ್ಯಾಟ್ ಕಮಿನ್ಸ್ ಅದೇ ವರ್ಷ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 20.50 ಕೋಟಿ ರೂ.ಗೆ ಮಾರಾಟವಾಗಿದ್ದರು.
ಗ್ರೀನ್ ಅವರನ್ನು ದುಬಾರಿ ಬೆಲೆಗೆ ಖರೀದಿಸುವ ಮೂಲಕ ಅಂತರ್ರಾಷ್ಟ್ರೀಯ ಪ್ರತಿಭೆಯನ್ನು ದೊಡ್ಡ ಮೊತ್ತಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಟ್ರೆಂಡ್ ಮುಂದುವರಿದಿದೆ. ಐಪಿಎಲ್ ಮಿನಿ ಹರಾಜು ಫ್ರಾಂಚೈಸಿಗಳಿಗೆ ಅಗ್ರಮಾನ್ಯ ಅಂತರ್ರಾಷ್ಟ್ರೀಯ ಆಟಗಾರರನ್ನು ಖರೀದಿಸಲು ಇರುವ ವೇದಿಕೆಯಾಗಿದೆ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಪ್ರಭಾವಬೀರಬಲ್ಲ ಆಟಗಾರನ ಮೇಲೆ ಗಮನಾರ್ಹ ಬಿಡ್ ಸಲ್ಲಿಸುವ ಪ್ರವೃತ್ತಿಯು ಹೆಚ್ಚಾಗಿದೆ.
►ಅತ್ಯಂತ ದುಬಾರಿ ಟಾಪ್-10 ವಿದೇಶಿ ಆಟಗಾರರು
ಕ್ಯಾಮರೂನ್ ಗ್ರೀನ್-ಕೋಲ್ಕತಾ ನೈಟ್ ರೈಡರ್ಸ್(2026)-25.20 ಕೋಟಿ ರೂ.
ಮಿಚೆಲ್ ಸ್ಟಾರ್ಕ್-ಕೋಲ್ಕತಾ ನೈಟ್ ರೈಡರ್ಸ್(2024)-24.75 ಕೋಟಿ ರೂ.
ಪ್ಯಾಟ್ ಕಮಿನ್ಸ್-ಸನ್ರೈಸರ್ಸ್ ಹೈದರಾಬಾದ್(2024)-20.50 ಕೋಟಿ ರೂ.
ಸ್ಯಾಮ್ ಕರನ್-ಪಂಜಾಬ್ ಕಿಂಗ್ಸ್(2023)-18.50 ಕೋಟಿ ರೂ.
ಕ್ಯಾಮರೂನ್ ಗ್ರೀನ್-ಮುಂಬೈ ಇಂಡಿಯನ್ಸ್(2023)-17.50 ಕೋಟಿ ರೂ.
ಕ್ರಿಸ್ ಮೊರಿಸ್-ರಾಜಸ್ಥಾನ ರಾಯಲ್ಸ್(2021)-16.25 ಕೋಟಿ ರೂ.
ಬೆನ್ ಸ್ಟೋಕ್ಸ್-ಚೆನ್ನೈ ಸೂಪರ್ ಕಿಂಗ್ಸ್(2023)-16.25 ಕೋಟಿ ರೂ.
ನಿಕೊಲಸ್ ಪೂರನ್-ಲಕ್ನೊ ಸೂಪರ್ ಜಯಂಟ್ಸ್(2023)-16 ಕೋಟಿ ರೂ.
ಪ್ಯಾಟ್ ಕಮಿನ್ಸ್-ಕೋಲ್ಕತಾ ನೈಟ್ ರೈಡರ್ಸ್(2020)-15.50 ಕೋಟಿ ರೂ.
ಕೈಲ್ ಜಮೀಸನ್-ರಾಯಲ್ ಚಾಲೆಂಜರ್ಸ್ ಬೆಂಗಳೂರು(2021)-15 ಕೋಟಿ ರೂ.