ಎಚ್‌ಐಎಲ್: ಪಂಜಾಬ್ ವಾರಿಯರ್ಸ್ ಫೈನಲ್‌ಗೆ
Update: 2016-02-20 23:53 IST
ರಾಂಚಿ, ಫೆ.20: ಡೆಲ್ಲಿ ವೇವ್‌ರೈಡರ್ಸ್ ತಂಡವನ್ನು ಮಣಿಸಿದ ಜೇಪಿ ಪಂಜಾಬ್ ವಾರಿಯರ್ಸ್ ತಂಡ ಸತತ ಮೂರನೆ ಬಾರಿ ಹಾಕಿ ಇಂಡಿಯಾ ಲೀಗ್‌ನಲ್ಲಿ (ಎಚ್‌ಐಎಲ್) ಪೈನಲ್ ತಲುಪಿದೆ.
ಶನಿವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು 3-1 ಅಂತರದಿಂದ ಮಣಿಸಿದ ಪಂಜಾಬ್ ತಂಡ ಪ್ರಶಸ್ತಿ ಸುತ್ತಿಗೆ ತಲುಪಿತು.
ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಕಳಿಂಗ ಲ್ಯಾನ್ಸರ್ ತಂಡವನ್ನು ಎದುರಿಸಲಿದೆ.
ಮೊದಲಾವಧಿಯಲ್ಲಿ ಉಭಯ ತಂಡಗಳು ಎಚ್ಚರಿಕೆಯಿಂದ ಆಡಿದವು. ದಿಲ್ಲಿ 6ನೆ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. ರೂಪೀಂದರ್ ಪಾಲ್ ದಿಲ್ಲಿಗೆ ಮೇಲುಗೈ ಒದಗಿಸಿದ್ದು, ಸಿಂಗ್ ಟೂರ್ನಿಯಲ್ಲಿ 12ನೆ ಗೋಲುಬಾರಿಸಿದರು. 19ನೆ ನಿಮಿಷದಲ್ಲಿ ಅರ್ಮಾನ್ ಖುರೇಷಿ ಪಂಜಾಬ್ 2-1 ಮುನ್ನಡೆ ಒದಗಿಸಿಕೊಟ್ಟರು. 51ನೆ ನಿಮಿಷದಲ್ಲಿ ಗೋಲು ಬಾರಿಸಿದ ಸೈಮನ್ ಆರ್ಚಡ್ ಪಂಜಾಬ್‌ಗೆ 3-1 ಮುನ್ನಡೆಯೊಂದಿಗೆ ಪಂದ್ಯ ಜಯಿಸಲು ನೆರವಾದರು.