×
Ad

ಎರಡನೆ ಟೆಸ್ಟ್‌ನಲ್ಲಿ ಮೆಕಲಮ್ ಸಾಧನೆ

Update: 2016-02-20 23:59 IST

ಕೈಸ್ಟ್‌ಚರ್ಚ್, ಫೆ.20: ವಿದಾಯದ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಕಿವೀಸ್ ಕಪ್ತಾನ ಬ್ರೆಂಡನ್ ಮೆಕಲಮ್ ಸಾಧನೆಯ ಕಿರು ನೋಟ.....

-ಕೇವಲ 54 ಎಸೆತಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಮೆಕಲಮ್ ವೆಸ್ಟ್‌ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್ ಹಾಗೂ ಪಾಕಿಸ್ತಾನದ ಮಿಸ್ಬಾವುಲ್ ಹಕ್ ಹೆಸರಲ್ಲಿದ್ದ ಜಂಟಿ ವಿಶ್ವ ದಾಖಲೆಯನ್ನು ಮುರಿದರು. ರಿಚರ್ಡ್ಸ್ ಹಾಗೂ ಮಿಸ್ಬಾಹ್ 56 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.

-ಮೆಕಲಮ್ 145 ರನ್‌ಗಳ ಇನಿಂಗ್ಸ್‌ನಲ್ಲಿ 21 ಬೌಂಡರಿ, 6 ಸಿಕ್ಸರ್‌ಗಳಿದ್ದವು. ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೆಕಲಮ್ ಟೆಸ್ಟ್‌ನಲ್ಲಿ ಒಟ್ಟು 106 ಸಿಕ್ಸರ್ ಸಿಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದರು.

-ಮೆಕಲಮ್ ಹಾಗೂ ಕೋರಿ ಆ್ಯಂಡರ್ಸನ್ 110 ಎಸೆತಗಳಲ್ಲಿ 179ರನ್ ಜೊತೆಯಾಟ ನಡೆಸಿದರು. 9.76 ರನ್‌ರೇಟ್‌ನಲ್ಲಿ ಸ್ಕೋರ್ ದಾಖಲಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ರೇಟ್ ಆಗಿದೆ.

-ಮೆಕಲಮ್ ಕ್ರೈಸ್ಟ್‌ಚರ್ಚ್‌ನಲ್ಲಿ ಆಡಿರುವ 2 ಪಂದ್ಯಗಳಲ್ಲೂ ಶತಕ ಬಾರಿಸಿದ್ದಾರೆ. 170ರ ಸರಾಸರಿಯಲ್ಲಿ ಒಟ್ಟು 340 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ 17 ಸಿಕ್ಸರ್ ಸಿಡಿಸಿದ್ದಾರೆ. ಇದು ಒಂದು ದಾಖಲೆಯಾಗಿದೆ.

-ಮೆಕಲಮ್ ಆಡಿರುವ 101 ಟೆಸ್ಟ್‌ನಲ್ಲಿ ಒಟ್ಟು 106 ಸಿಕ್ಸರ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಆಡಿದ ಪಂದ್ಯಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ 5ನೆ ದಾಂಡಿಗ. ಟೆಸ್ಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪ್ರಮುಖರೆಂದರೆ: ಆ್ಯಡಂ ಗಿಲ್‌ಕ್ರಿಸ್ಟ್(96 ಟೆಸ್ಟ್ 100 ಸಿಕ್ಸರ್), ಕ್ರಿಸ್‌ಕೈರ್ನ್ಸ್(62 ಟೆಸ್ಟ್, 87 ಸಿಕ್ಸರ್), ಆ್ಯಂಡ್ರೂ ಫ್ಲಿಂಟಾಫ್(79 ಟೆಸ್ಟ್, 82 ಸಿಕ್ಸರ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News