ಟೆಕ್ಕಿ ಪ್ರಭಾ ಕೊಲೆ ಪ್ರಕರಣ ಭಾರತೀಯನ ಕೈವಾಡ ಶಂಕೆ
Update: 2016-02-22 23:44 IST
ಮೆಲ್ಬೋರ್ನ್,ಫೆ.22: ಕಳೆದ ರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ಟೆಕ್ಕಿ, ದ.ಕನ್ನಡದ ಬಂಟ್ವಾಳ ಮೂಲದ ಪ್ರಭಾ ಅರುಣ್ ಕುಮಾರ್ ಹತ್ಯೆ ಪ್ರಕರಣದಲ್ಲಿ ತಾಜಾ ಸುಳಿವೊಂದು ತನಿಖಾ ತಂಡಕ್ಕೆ ಲಭಿಸಿದ್ದು, ಈ ಹತ್ಯೆಯಲ್ಲಿ ಭಾರತೀಯ ವ್ಯಕ್ತಿಯ ಪಾತ್ರವಿರುವ ಸಾಧ್ಯತೆಯನ್ನು ಅದು ಬೆಟ್ಟು ಮಾಡಿದೆ.
ತಾನು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯಿಂದ ಮೂರು ವರ್ಷಗಳ ಅವಧಿಗೆ ಡೆಪ್ಯುಟೇಷನ್‌ನಲ್ಲಿ ಆಸ್ಟ್ರೇಲಿಯಾದ ಸಿಡ್ನಿಗೆ ಕಳುಹಿಸಲ್ಪಟ್ಟಿದ್ದ ಪ್ರಭಾರನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ಆಕೆ ತನ್ನ ನಿವಾಸಕ್ಕೆ ಮರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಯೋರ್ವ ಚೂರಿಯಿಂದ ಇರಿದು ಹತ್ಯೆಗೈದಿದ್ದ.
ಹತ್ಯೆ ಪ್ರಕರಣದ ತನಿಖೆಯ ಅಂಗವಾಗಿ 2000ಕ್ಕೂ ಅಧಿಕ ಜನರನ್ನು ಪ್ರಶ್ನಿಸಿದ್ದ ಪೊಲೀಸರು ಸುಮಾರು 250 ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.