ಲಲಿತಾ ಬಾಬರ್‌ಗೆ ‘ವರ್ಷದ ಕ್ರೀಡಾ ವ್ಯಕ್ತಿ ಪ್ರಶಸ್ತಿ’

Update: 2016-02-22 18:39 GMT

ಹೊಸದಿಲ್ಲಿ, ಫೆ.22: ಭಾರತದ ದೂರ ಅಂತರದ ಓಟಗಾರ್ತಿ ಲಲಿತಾ ಬಾಬರ್ 2015ರ ಸಾಲಿನ ವರ್ಷದ ಕ್ರೀಡಾವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್ ವರ್ಷದ ಉದಯೋನ್ಮುಖ ಆಟಗಾರ್ತಿ, ಅಮೆಚೂರ್ ಕಬಡ್ಡಿ ಫೆಡರೇಶನ್ ‘ವರ್ಷದ ಶ್ರೇಷ್ಠ ನ್ಯಾಶನಲ್ ಕ್ರೀಡಾ ಫೆಡೇಶನ್ ಪ್ರಶಸ್ತಿ’, ಹಾಕಿ ದಂತಕತೆ ಬಲ್ಬೀರ್ ಸಿಂಗ್ ಜೀವಮಾನ ಸಾಧನಾ ಪ್ರಶಸ್ತಿಗೆ ಭಾಜನರಾದರು.

 ಲಲಿತಾ ಇತ್ತೀಚೆಗೆ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News