ದಿಲ್ಲಿ ಪೊಲೀಸರ ಯು-ಟರ್ನ್
Update: 2016-02-23 23:59 IST
ಹೊಸದಿಲ್ಲಿ, ಫೆ.23: ಜಾಮೀನು ಬಿಡುಗಡೆ ಕೋರಿ ದಿಲ್ಲಿ ಹೈಕೋರ್ಟ್‌ನಲ್ಲಿ ಕನ್ಹಯ್ಯ ಸಲ್ಲಿಸಿದ ಜಾಮೀನು ಮನವಿಯನ್ನು ದಿಲ್ಲಿ ಪೊಲೀಸರು ವಿರೋಧಿಸಿದ್ದು, ತಮ್ಮ ಹಿಂದಿನ ನಿರ್ಧಾರದಿಂದ ಯು-ಟರ್ನ್ ಪಡೆದುಕೊಂಡಿದ್ದಾರೆ.
‘ಬದಲಾದ ಪರಿಸ್ಥಿತಿಯ ಹಿನ್ನೆಲೆಯಲಿ’್ಲ ಕನ್ಹಯ್ಯೆಗೆ ಜಾಮೀನು ನೀಡುವುದನ್ನು ವಿರೋಧಿಸುವುದಾಗಿ ದಿಲ್ಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ತಿಳಿಸಿದ್ದಾರೆ. ಒಂದು ವೇಳೆ ಆತ ಜಾಮೀನು ಪಡೆದು ಹೊರಬಂದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಅವರು ಹೇಳಿದ್ದಾರೆ. ಈ ಮೊದಲು ದಿಲ್ಲಿ ಪೊಲೀಸರು, ಕನ್ಹಯ್ಯಾ ಜಾಮೀನು ಮನವಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಿಲ್ಲವೆಂದು ತಿಳಿಸಿದ್ದರು.
ದೇಶದ್ರೋಹದ ಆರೋಪದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡು, ಪ್ರಸ್ತುತ ಜೆಎನ್‌ಯು ವಿವಿಯ ಆವರಣದಲ್ಲಿ ಕಾಣಿಸಿಕೊಂಡಿರುವ ಇತರ ಐವರು ಜೆಎನ್‌ಯು ವಿದ್ಯಾರ್ಥಿಗಳು ತನಿಖೆಗೆ ಸಹಕರಿಸದಿದ್ದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಬಸ್ಸಿ ತಿಳಿಸಿದ್ದಾರೆ.